ಸುದ್ದಿಮೂಲ ವಾರ್ತೆ ಮುದಗಲ್, ಜ.22:
ಕಲಿಕಾ ಹಬ್ಬದ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕ್ರಿಿಯಾತ್ಮಕ ಚಟುವಟಿಕೆ ವೃದ್ಧಿಿಯಾಗಿ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುತ್ತದೆ ಎಂದು ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರು ಬುಧುವಾರ ಹೇಳಿದರು.
ಪಟ್ಟಣದ ವೆಂಕಟರಾಯಪೇಟೆ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಹಮ್ಮಿಿಕೊಂಡಿದ್ದ ಮುದಗಲ್ ಕ್ಲಸ್ಟರ್ ಮಟ್ಟದ 2025-26ನೇ ಸಾಲಿನ ಎ್ಎಲ್ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು ಕಲಿಕಾ ಹಬ್ಬದಿಂದ ಶಾಲಾ ಮಕ್ಕಳಲ್ಲಿ ಕಲಿಯುವ ಆಸಕ್ತಿಿ ಹೆಚ್ಚಾಾಗುತ್ತದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋೋತ್ಸಾಾಹಿಸಲು ಮತ್ತು ಸೃಜನಶೀಲತೆ ಗುಣ ಬೆಳೆಸಲು ಅನುಕೂಲವಾಗುತ್ತದೆ. ಶಾಲೆಗಳಲ್ಲಿ ಕಲಿಕಾ ಹಬ್ಬದ ಚಟುವಟಿಕೆಗಳ ಆಯೋಜನೆಯಿಂದ ವಿದ್ಯಾಾರ್ಥಿಗಳ ಮನೋಬಲ ವೃದ್ಧಿಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಕುರಿತು ಪ್ರಾಾಸ್ತಾಾವಿಕವಾಗಿ ಮುಖ್ಯಶಿಕ್ಷಕಿ ಶೋಭಾ, ಶಿವಶಂಕರ ಪಾಟೀಲ್ ಮಾತನಾಡಿದರು. ಸ್ವಾಾಗತ ಸಿಆರ್ಪಿ ರಾಮಚಂದ್ರ ಢವಳೆ, ನಿರೂಪಣೆ ಮಹಾಂತೇಶ ಹಳ್ಳೂರು ನೆರವೇರಿಸಿದರು.
ಪುರಸಭೆ ವ್ಯವಸ್ಥಾಾಪಕ ಸುರೇಶ ವನಹಳ್ಳಿಿ, ಮುಖ್ಯಶಿಕ್ಷಕರಾದ ಸಂಗಯ್ಯ ಹಿರೇಮಠ, ಹನುಮಯ್ಯ, ವೀರಯ್ಯ ಝಳಕಿಮಠ, ನಿಶಿ ನಾಗೇಂದ್ರ, ಮುಖಂಡರಾದ ಶರಣಪ್ಪ ಕಟ್ಟಿಿಮನಿ, ಬಸವರಾಜ ಬಂಕದಮನಿ, ವೆಂಕಟೇಶ ಹಿರೇಮನಿ, ಆನಂದ ಪೇಂಟರ್, ಮೌನೇಶ ಕಟ್ಟಿಿಮನಿ, ಸಂಗಪ್ಪ ಹಿರೇಮನಿ, ಮಹಿಬೂಬಸಾಬ ಡೊಂಗ್ರಿಿ, ಮಲ್ಲೇಶ ತೊಂಟನವರ್, ಹನುಮಂತ ಬಿಲ್ಲಿ, ರವಿ ಕಟ್ಟಿಿಮನಿ ಹಾಗೂ ವಿವಿಧ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಪಾಲಕ, ಪೋಷಕರು, ವಿದ್ಯಾಾರ್ಥಿಗಳು ಇದ್ದರು.
ಕಲಿಕಾ ಹಬ್ಬದಿಂದ ಶೈಕ್ಷಣಿಕ ಪ್ರಗತಿ – ಸುಜಾತಾ ಹುನೂರು

