ಸುದ್ದಿಮೂಲವಾರ್ತೆ
ಕೊಪ್ಪಳ,ಆ.21: ಕೊಪ್ಪಳ ತಾಲೂಕಿನಲ್ಲಿರುವ ಬೃಹತ್ ಉಕ್ಕು ಕಾರ್ಖಾನೆಗಳಿಂದ ಅಪಾರ ಪ್ರಮಾಣ ತ್ಯಾಜ್ಯ ತುಂಗಭದ್ರಾ ನದಿ ಸೇರುತ್ತಿದೆ ಇದರಿಂದ ಕುಡಿವ ನೀರು ಕಲುಷಿತಗೊಳ್ಳುತ್ತಿದೆ. ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಪ್ಪಳ ತಾಲೂಕಿನ ಹಿರೇಬಗನಾಳ ಭಾಗದ ಗ್ರಾಮಸ್ಥರು ಕಾರ್ಖಾನೆಯ ಧೂಳಿನ ಸಮಸ್ಯೆ, ರಸ್ತೆ ಸಮಸ್ಯೆ, ನೊಣಗಳ ಕಾಟ ಮೊದಲಾದ ಒಂದಿಲ್ಲೊಂದು ಸಮಸ್ಯೆಗಳನ್ನು ಅನುಭವಿಸುತ್ತಿರುವುದು ಕೇಳಿದ್ದೀವಿ. ಆದರೆ ತುಂಗಭದ್ರಾ ಹಿನ್ನೀರು ಪ್ರದೇಶದ ಈ ಭಾಗದಲ್ಲಿ ಮಳೆ ಬಂತೆಂದರೇ ಸಾಕು ಹಳ್ಳ-ಕೊಳ್ಳಗಳ ಮೂಲಕ ವಿವಿಧ ಕಾರ್ಖಾನೆಗಳ ಸಾಕಷ್ಟು ತ್ಯಾಜ್ಯ ತುಂಗಭದ್ರಾ ಜಲಾಶಯಕ್ಕೆ ಸೇರುತ್ತದೆ.
ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸಮೀಪ ಸ್ಥಾಪನೆಗೊಂಡಿರುವ ಧೃವದೇಶ ಮೇಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ, ಶಿಂಡಿಯಾ ಸ್ಟೀಲ್ಸ್, ವನ್ಯಾ ಸ್ಟೀಲ್ಸ್-1,2 ತನುಶ್ ಇಸ್ಫಾತ್-1,2, ಹೆಚ್.ಆರ್.ಜಿ.ಕಂಪನಿ, ಯಿಂದ ಸಾಕಷ್ಟು ಕಲಬೇರೆಕೆ ತ್ಯಾಜ್ಯ ತುಂಗಭದ್ರಾ ನದಿಗೆ ಸೇರುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ.
ಹಿರೇಬಗನಾಳ ಗ್ರಾ.ಪಂ.ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ಸ್ಥಾಪನೆಗೊಂಡಿರುವ ಕೆಲ ಕಾರ್ಖಾನೆಗಳು ಜಿಲ್ಲಾಡಳಿತದ ಆದೇಶವನ್ನು ಗಾಳಿಗೆ ತೂರಿ ಹಳ್ಳದ ಮೂಲಕ ತುಂಗಭದ್ರಾ ಜಲಾಶಯಕ್ಕೆ ಸಾಕಷ್ಟು ಕಲುಷಿತ ತ್ಯಾಜ್ಯವನ್ನು ಬೇಕಾಬಿಟ್ಟಿ ಬೀಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕಣ್ಣ್ಮುಚ್ಚಿ ಕುಳಿತ್ತಿದ್ದಾರೆ ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರ ಆರೋಪವಾಗಿದ್ದು, ಇನ್ನಾದರೂ ಕೊಪ್ಪಳ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.