ಸುದ್ದಿಮೂಲ ವಾರ್ತೆ ಹೊಸಪೇಟೆ,ಡಿ.1:
ಹೊಸಪೇಟೆ ನಗರಸಭೆ ಸ್ಥಾಾಯಿ ಸಮಿತಿಗೆ ನೂ ತನ ಅಧ್ಯಕ್ಷರಾಗಿ 14 ನೇ ವಾರ್ಡಿನ ಸದಸ್ಯ ಸರವಣನ್ ಅವಿರೋಧವಾಗಿ ಆಯ್ಕೆೆಯಾಗಿದ್ದಾರೆ ಎಂದು ನಗರ ಸಭೆ ಪೌರಾಯುಕ್ತ ಯರಗುಡಿ ಶಿವಕುಮಾರ್ ಅಧಿಕೃತವಾಗಿ ಪ್ರಕಟಿಸಿದರು
ನಗರಸಭೆ ಸಭಾಂಗಣದಲ್ಲಿ ಸ್ಥಾಾಯಿ ಸಮಿತಿಗೆ 14ನೇ ವಾರ್ಡಿನ ಸದಸ್ಯರಾದ ಶರವಣ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.ಸೂಚಕರಾಗಿ ಸದಸ್ಯ ಹೆಚ್ ಕೆ ಮಂಜುನಾಥ್ , ಎಲ್ ಎಸ್ ಆನಂದ್ ಅನುಮೋದಕರಾಗಿದ್ದರು. ನಾಮಪತ್ರ ಸಲ್ಲಿಸಿದ ಕಾರಣ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆೆಯಾಗಿದ್ದಾರೆ ಎಂದು ತಿಳಿಸಿದರು.
ನಗರದ ಸ್ವಚ್ಛತೆಗೆ ಮೊದಲ ಆದ್ಯತೆ : ಸರವಣನ್
ಹೊಸಪೇಟೆ ನಗರದ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದು ತಮ್ಮ ಮೊದಲ ಆದ್ಯತೆ ನೀಡುವುದಾಗಿ ಸುದ್ದಿಮೂಲ ಪತ್ರಿಿಕೆಗೆ ತಿಳಿಸಿದರು.
ನಗರಸಭೆ ನೂತನ ಸ್ಥಾಾಯಿ ಸಮಿತಿ ಅಧ್ಯಕ್ಷರಾದ ನಂತರ ಸುದ್ದಿಮೂಲ ಪತ್ರಿಿಕೆ ಯೊಂದಿಗೆ ಮಾತನಾಡಿದ ಅವರು ಸ್ವಚ್ಛತೆ, ಶುದ್ಧ ಕುಡಿಯುವ ನೀರು ಹಾಗೂ ನಗರದಲ್ಲಿ ಹೆಚ್ಚಾಾಗಿರುವ ನಾಯಿಗಳ ಹಾವಳಿ ನಿಯಂತ್ರಣಕ್ಕೆೆ ನಗರದ ಹೊರವಲಯದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬ್ಯಾಾರಿಕೇಡ್ ಮಾಡಿ ನಾಯಿಗಳನ್ನು ಸ್ಥಳಾತರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಅಧ್ಯಕ್ಷರಾದ ರೂಪೇಶ್ ಕುಮಾರ್, ಉಪಾಧ್ಯಕ್ಷರಾದ ಜೀವರತ್ನಂ, ಮಾಜಿ ಉಪಾಧ್ಯಕ್ಷರು ಹಾಗೂ ಸದಸ್ಯರಾದ ಎಸ್ ಆನಂದ್ , ಕೆ ಗೌಸ್ ಮೋಯಿದ್ದೀನ್, ರಾಘವೇಂದ್ರ , ತಾರಿಹಳ್ಳಿಿ ಜಂಬೂನಾಥ , ಎಚ್ ಕೆ ಮಂಜುನಾಥ್ , ಎಸ್. ಕಿರಣ್, ಹೆಚ್ ಎಲ್ ಸಂತೋಷ್ ಕುಮಾರ್ ಸೇರಿದಂತೆ ಇತರ ಸದಸ್ಯರು ಉಪ ಸ್ಥಿಿತರಿದ್ದರು.
ಹೊಸಪೇಟೆ ನಗರಸಭೆ ಸ್ಥಾಯಿ ಸಮಿತಿಗೆ ಆಯ್ಕೆ

