ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಮೇ12: ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದರೂ ಮತದಾರರಿಗೆ ವ್ಯಾಪಕವಾಗಿ ಹಣ ಹಂಚಿಕೆಯಾಗಿ ಚುನಾವಣೆಯ ಮಹತ್ವ ಕಳೆದುಕೊಂಡಿದೆ ಎಂದು ದಲಿತ ಚಿಂತಕ, ಹೋರಾಟಗಾರ ಗಂಗನಬೀಡು ವೆಂಕಟಸ್ವಾಮಿ ಆರೋಪಿಸಿದರು.
ಕೆ.ಆರ್.ಪುರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪ್ರಭುಗಳು ಎನಿಸಿಕೊಳ್ಳುವ ಮತದಾರ ಪ್ರಭುಗಳು ಎಗ್ಗಿಲ್ಲದೆ ಅಭ್ಯರ್ಥಿ ಕೊಟ್ಟ ಹಣವನ್ನು ತೆಗೆದುಕೊಂಡು ಮತ ಚಲಾವಣೆ ಮಾಡಿದ್ದಾರೆ. ಭಾರತದ ಸಂವಿಧಾನ ಪ್ರಕಾರ ಚುನಾವಣೆ ನೀತಿಸಂಹಿತೆ ಅಡಿಯಲ್ಲಿ ಹಣ ಹಂಚಿಕೆ ಮಾಡಿದ ಅಭ್ಯರ್ಥಿ ಹಾಗೂ ಅವ್ಯವಹಾರದಲ್ಲಿ ತೊಡಗಿ ಹಣ ತೆಗೆದುಕೊಂಡ ಮತದಾರನಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿದಾಗ ಮಾತ್ರ ನೀತಿಸಂಹಿತೆಗೆ ಅರ್ಥ ಬರುತ್ತದೆ ಎಂದರು.
ಚುನಾವಣೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಜನಪ್ರತಿನಿಧಿಗಳು ಚುನಾವಣೆಗಳನ್ನು ವ್ಯಾಪಾರಿಕರಣ ಮಾಡಿ ಸಂವಿಧಾನಕ್ಕೆ ಅಗೌರವ ತೋರುತ್ತಿದ್ದಾರೆ. ಮತದಾರ ಪ್ರಭುಗಳು ಎನಿಸಿಕೊಳ್ಳುವ ಮತದಾರರು ಹಣದ ಆಸೆಗೆ ಮತ ನೀಡಿ ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಹಣ ತೆಗೆದುಕೊಂಡವನಿಗೆ ಮತ್ತು ಹಣ ತೆಗೆದುಕೊಂಡವನಿಗೆ ದೂರು ದಾಖಲಿಸಿದರೆ ಕಣ್ಣ ಮುಂದೆ ನಡೆಯುವ ಹಣ ಚಲಾವಣೆ ನಿಲ್ಲಿಸಬಹುದು. ಭಾರತದ ಸಂವಿಧಾನ ಉಳಿಯಲು ಕಠಿಣ ನಿಲುವು ತಾಳಬೇಕು ಎಂದು ಹೇಳಿದರು.