ನವದೆಹಲಿ, ಜ.8:
ಪಶ್ಚಿಿಮ ಬಂಗಾಳದ ನೊಬೆಲ್ ಪುರಸ್ಕೃತ ಅರ್ಥಶಾಸಜ್ಞ ಅಮರ್ತ್ಯಸೇನ್ ಅವರಿಗೆ ಎಸ್ಐಆರ್ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ವಿಶೇಷ ತೀವ್ರ ಮತದಾರರ ಪಟ್ಟಿಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಅರ್ಜಿಯಲ್ಲಿ ನೀಡಿರುವ ವಿಷಯಗಳ ಬಗ್ಗೆೆ ಗೊಂದಲ ಇದ್ದು ಇದರ ನಿವಾರಣೆಗೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಲಾಗಿದೆ.
ಅಮರ್ತ್ಯಸೇನ್ ಸದ್ಯ ವಿದೇಶದಲ್ಲಿ ಇದ್ದಾರೆ. ಇಲ್ಲಿನ ಬೋಲ್ಪುರದಲ್ಲಿ ಅವರ ಪೂರ್ವಿಕರ ಮನೆ ಇದೆ. ಅವರ ಸಂಬಂಧಿಕರಿಗೆ ಈ ನೋಟಿಸ್ ತಲುಪಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಮರ್ತ್ಯಸೇನ್ ಅವರ ಸಂಬಂಧಿಕರು ನೋಟಿಸ್ ಸ್ವೀಕರಿಸಿದ್ದಾರೆ. ಈ ಕುರಿತು ಸೆನ್ ಅವರಿಗೆ ಮಾಹಿತಿ ನೀಡುವೆ ಎಂದು ಸಂಬಂಧಿಕರು ಹೇಳಿದ್ದಾರೆ.

