ಸುದ್ದಿಮೂಲ ವಾರ್ತೆ ಗಂಗಾವತಿ, ಜ.01:
ನಗರದ ಪ್ರತಿಷ್ಠಿಿತ ಹಣಕಾಸು ಸಂಸ್ಥೆೆಯಾಗಿರುವ ಶ್ರೀಚನ್ನಬಸವ ಸ್ವಾಾಮಿ ಸೌಹಾರ್ದ ಸಹಕಾರಿ ಬ್ಯಾಾಂಕ್ (ಸಿಬಿಎಸ್) ಸಂಸ್ಥೆೆಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾಾನಗಳಿಗೆ ನಡೆದ ಚುನಾವಣೆಯಲ್ಲಿ ಒಬ್ಬರು ಮಾತ್ರ ನೂತನವಾಗಿ ಉಳಿದೆಲ್ಲರೂ ಪುನರಾಯ್ಕೆೆಯಾಗಿದ್ದಾಾರೆ.
ಮೀಸಲು ಸ್ಥಾಾನಗಳನ್ನು ಹೊತರತುಪಡಿಸಿ ಉಳಿದ ಏಳು ನಿರ್ದೇಶಕ ಸ್ಥಾಾನಕ್ಕೆೆ ಆಯ್ಕೆೆ ಬಯಸಿ ಎಂಟು ಜನ ಕಣದಲ್ಲಿದ್ದರು. ಒಟ್ಟು 211 ಜನ ಮತದಾರರಲ್ಲಿ 195 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಐದು ಮತಗಳನ್ನು ಅಸಿಂಧುವಾಗಿವೆ. ಮಿಕ್ಕಂತೆ 190 ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಭಿವೃದ್ಧಿಿ ಅಧಿಕಾರಿ ಶಿವಾಜಿ ಮಂಗಳೂರು ತಿಳಿಸಿದ್ದಾಾರೆ.
ಹಾಲಿ ಆಡಳಿತ ಮಂಡಳಿಯಲ್ಲಿರುವ ಬಹುತೇಕ ನಿರ್ದೇಶಕರಾಗಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿಿ 187 ಮತ, ಹಾಲಿ ಅಧ್ಯಕ್ಷ ಹೊಸಕೇರಿ ಗಿರಿಯಪ್ಪ 185 ಮತ, ಕೆ. ಚನ್ನಬಸವಯ್ಯ 181 ಮತ, ಅರಳಿ ಶೇಖರಪ್ಪ ಹಾಗೂ ಬಸವರಾಜ ವೀರಶೆಟ್ಟಿಿ ಹಾಗೂ ಮಾಜಿ ಸಂಸದ ಎಸ್. ಶಿವರಾಮಗೌಡ ತಲಾ 180 ಮತ, ರಮೇಶ ಗೌಳಿ 179 ಮತಗಳನ್ನು ಪಡೆದು ಪುನರಾಯ್ಕೆೆಯಾಗಿದ್ದಾಾರೆ. ಚುನಾವಣೆ ನಡೆಯಲು ಪ್ರಮುಖ ಕಾರಣವಾದ ಅಭ್ಯರ್ಥಿ ಶರಣಯ್ಯ ಸ್ವಾಾಮಿ ಹಿರೇಮಠ ಕೇವಲ 38 ಮತ ಪಡೆಯುವ ಮೂಲಕ ಮುಖಭಂಗ ಅನುಭವಿಸಿದ್ದಾಾರೆ.
ಬ್ಯಾಾಂಕಿನ ವಿವಿಧ ಮೀಸಲು ಸ್ಥಾಾನದಿಂದ ತಿಮ್ಮಣ್ಣ ಮೇದಾರ (ಎಸ್ಟಿಿ), ಕೆ. ಕಾಳಪ್ಪ (ಓಬಿಸಿ ಎ) ರಾಚಪ್ಪ ಸಿದ್ದಾಾಪುರ (ಓಬಿಸಿ ಬಿ) ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಲತಾ ಮಾಲಿಪಾಟೀಲ್, ಸುಜಾತ ಅಂಗಡಿ ಆವಿರೋಧ ಆಯ್ಕೆೆಯಾಗಿದ್ದಾಾರೆ.
ನಾಲ್ಕು ಸಾವಿರಕ್ಕೂ ಅಧಿಕ ಶೇರುದಾರರು ಹೊಂದಿರುವ ಈ ಹಣಕಾಸು ಸಂಸ್ಥೆೆಯಲ್ಲಿ 20 ಸಾವಿರಕ್ಕೂ ಅಧಿಕ ಗ್ರಾಾಹಕರಿದ್ದಾಾರೆ. ವಾರ್ಷಿಕ ನೂರಾ ಇಪ್ಪತ್ತು ಕೋಟಿಗೂ ಅಧಿಕ ಮೊತ್ತದ ವಹಿವಾಟು ಹೊಂದಿರುವ ಈ ಸಂಸ್ಥೆೆ, ಜಿಲ್ಲೆೆಯಲ್ಲಿ ಅತ್ಯಂತ ಪ್ರತಿಷ್ಠಿಿತ ಹಣಕಾಸು ಸಂಸ್ಥೆೆ ಇದಾಗಿದೆ.
ಗಂಗಾವತಿ ಪ್ರತಿಷ್ಠಿತ ಸಿಬಿಎಸ್ ಬ್ಯಾಾಂಕ್ ಆಡಳಿತ ಮಂಡಲಿಗೆ ಚುನಾವಣೆ ಪರಣ್ಣ ಮುನವಳ್ಳಿ, ಶಿವರಾಮಗೌಡ, ಕೆ.ಕಾಳಪ್ಪರು ಸೇರಿ ಬಹುತೇಕರು ಪುನರಾಯ್ಕೆ

