ಸುದ್ದಿಮೂಲ ವಾರ್ತೆ
ಹೊಸಕೋಟೆ,ಆ.18:ಹೊಸಕೋಟೆ ತಾಲ್ಲೂಕು ನೆಲವಾಗಿಲು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 23 ರಿಂದ 28 ಐದು ವರ್ಷ ಆಡಳಿತ ಮಂಡಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದ್ದು ಸಂಘಕ್ಕೆ 13 ಸ್ಥಾನಗಳು ಪೈಕಿ ಸಾಮಾನ್ಯ 7. ಮಹಿಳಾ ಮೀಸಲು 2.ಪರಿಶಿಷ್ಟ ಮೀಸಲು 1.ಹಿಂದುಳಿದ ವರ್ಗ ಪ್ರವರ್ಗ ಎ .1. ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ 1. ಪರಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದೆ ಇರುವುದಕ್ಕೆ ಒಟ್ಟು 12 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಇದೇ ತಿಂಗಳು 18 ಶುಕ್ರವಾರ ಕೊನೆಯ ದಿನಾಂಕವಾಗಿದ್ದು ಉಮೇದುವಾರಿಕೆ ಅರ್ಜಿಗಳನ್ನು ಮತ್ತು ನಾಮಪತ್ರ ವಾಪಸ್ ಪಡೆಯಲು 20ನೇ ತಾರೀಕು ಭಾನುವಾರ 3:00ವರೆಗೆ ಕಾಲಾವಕಾಶವಿದ್ದು ಚುನಾವಣೆ ಅಗತ್ಯವಾದಲ್ಲಿ ದಿನಾಂಕ 25.08/ 23 ಶುಕ್ರವಾರ 10 ಗಂಟೆಯಿಂದ 3 ಗಂಟೆವರೆಗೆ ಸಂಘದ ಆವರಣದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣೆ ಅಧಿಕಾರಿ ವಿ ಶಿವಕುಮಾರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಯಾದ ಡಿ ಜಯಣ್ಣ ಮಾಜಿ ಅಧ್ಯಕ್ಷ ಜಿ ಮೂರ್ತಿ ಎಪಿಎಂಸಿ ಮಾಜಿ ನಿರ್ದೇಶಕ ಆರ್ ಚಂದ್ರಮೋಹನ್ ಸಂಘದ ಮಾಜಿ ಕಾರ್ಯದರ್ಶಿ ಮುಕುಂದ ಗೌಡ ಗ್ರಾಮದ ಮುಖಂಡರಾದ ಎನ್ ಡಿ ನಾರಾಯಣಸ್ವಾಮಿ . ಎನ್ ಡಿ ಚಂದ್ರಪ್ಪ .ಸಂತೋಷ್ ಕುಮಾರ್. ಬೀರೇಶ್. ಹಾಜರಿದ್ದರು. 18.ಹೊಸಕೋಟೆ .1.ರಲ್ಲಿ ನೆಲವಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಾಮಪತ್ರ ಸಲ್ಲೇಸುತ್ತಿರುವ ಭಾವಚಿತ್ರಗಳು