ಸುದ್ದಿಮೂಲ ವಾರ್ತೆ
ತುಮಕೂರು,ಮಾ.31: ಕವಿಪ್ರನಿನಿಯು ಹೊಸದಾಗಿ 110 ಕೆ.ವಿ. 400 ಚ.ಮಿ.ಮೀ. ವಿದ್ಯುತ್ ಭೂಗತ ಕೇಬಲ್ ಮಾರ್ಗಗಳಾದ ನಿಟ್ಟೂರು ಸ್ವೀಕರಣಾ ವಿದ್ಯುತ್ ಕೇಂದ್ರದಿಂದ ಉದ್ದೇಶಿತ ರೈಲ್ವೇ ಟ್ರ್ಯಾಂಯಕ್ಷನ್
ಉಪಸ್ಥಾವರ ಪುರದವರೆಗೆ(4.3ಕಿ.ಮೀ.) ನಿರ್ಮಿಸಿದ್ದು, ಸದರಿ ಮಾರ್ಗಗಳಲ್ಲಿ ಮಾರ್ಚ್ 31ರಂದು ಅಥವಾ ತದನಂತರ ಸದರಿ ಮಾರ್ಗಗಳಲ್ಲಿ ವಿದ್ಯುತ್ ಹರಿಸುತ್ತಿದ್ದು, ಸಾರ್ವಜನಿಕರು ಈ ಕೇಬಲ್ ಮಾರ್ಗದಲ್ಲಿ ಅಗೆಯುವುದು ಅಥವಾ ಇನ್ನಾವುದೇ ಚಟುವಟಿಕೆ ನಡೆಸಬಾರದೆಂದು ಕೆಪಿಟಿಸಿಎಲ್ ತಿಳಿಸಿದೆ.
220/110/11ಕೆ.ವಿ. ನಿಟ್ಟೂರು ಸ್ವೀಕರಣಾ ವಿದ್ಯುತ್ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ 208, ಕೆರೆಹಳ್ಳಿ-ಬಂಡಿಹಳ್ಳಿ ರಸ್ತೆ ಮಾರ್ಗದಲ್ಲಿ 110/25ಕೆ.ವಿ. ಉದ್ದೇಶಿತ ರೈಲ್ವೇ ಟ್ರ್ಯಾಂಯಕ್ಷನ್ ಉಪಸ್ಥಾವರ ಪುರದವರೆಗಿನ ಕೇಬಲ್ ಮಾರ್ಗದಲ್ಲಿ ಸಾರ್ವಜನಿಕರು, ಸರ್ಕಾರಿ ಸಂಸ್ಥೆ, ಖಾಸಗಿ ಸಂಸ್ಥೆಯವರು ಅಗೆಯಬಾರದೆಂದು ಹಾಗೂ ಯಾರಾದರೂ ಇಂತಹ ಕೃತ್ಯಗಳನ್ನು ಎಸಗಿದಲ್ಲಿ ಉಂಟಾಗುವ ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ ಹಾಗೂ ಇದರಿಂದ ಆಗುವ ನಿಗಮದ ನಷ್ಟವನ್ನು ಸಂಬಂಧಪಟ್ಟವರು ಭರಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.