ಸುದ್ದಿಮೂಲ ವಾರ್ತೆ ಬೆಂಗಳೂರು, ನ.14:
ತುಂಗಭದ್ರಾಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸುವುದನ್ನು ಕೈಬಿಟ್ಟು ಅಣೆಕಟ್ಟೆೆಯ ಭದ್ರತೆ ದೃಷ್ಟಿಿಯಿಂದ ಎಲ್ಲಾ ಕ್ರಸ್ಟ್ಗೇಟ್ಗಳನ್ನು ಬದಲಾಯಿಸುವ ಮಹತ್ವದ ನಿರ್ಣಯವನ್ನು ಇಂದು ತೆಗೆದುಕೊಳ್ಳಲಾಯಿತು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ತುಂಗಭದ್ರಾಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125 ನೇ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್, ತುಂಗಭದ್ರಾಾ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಸಚಿವ ಶಿವರಾಜ ತಂಗಡಗಿ, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಸೇರಿ ವಿಜಯನಗರ, ಬಳ್ಳಾಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳು, ರೈತರ ಮುಖಂಡರ ಸಭೆ ನಡೆಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಸದ್ಯ ಜಲಾಶಯದಲ್ಲಿ 75 ಟಿಎಂಸಿ ನೀರು ಲಭ್ಯವಿದೆ. ತುಂಗಭದ್ರ ಜಲಾಶಯದಲ್ಲಿ ಕರ್ನಾಟಕದ ಪಾಲು ಶೇ.65ರಷ್ಟು ಮತ್ತು ಆಂಧ್ರ ಹಾಗೂ ತೆಲಂಗಾಣದ ಪಾಲು ಶೇ.35ರಷ್ಟು ಇದೆ. ಹೀಗಾಗಿ ಎರಡನೇ ಬೆಳೆಗೆ ನೀರು ಹರಿಸಬೇಕು ಎಂದರೆ 60 ಟಿಎಂಸಿ ನೀರು ಬೇಕಾಗುತ್ತದೆ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿರುವುದರಿಂದ ಎರಡನೇ ಬೆಳೆಗೆ ನೀರು ಹರಿಸದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದೆ.
ಆದರೆ, ಸದ್ಯ ಭತ್ತದ ಬೆಳೆಗೆ ನವೆಂಬರ್ 30ರವರೆಗೂ ನೀರು ಹರಿಸಲಾಗುವುದು. ಅಲ್ಲದೆ, ಜೋಳ, ಹತ್ತಿಿ, ಮೆಣಸಿನಕಾಯಿ ಇತರೆ ಬೆಳೆದುನಿಂತ ಬೆಳೆಗಳಿಗೆ ಜ.10ರವರೆಗೂ ನೀರು ಕೊಡಲಾಗುವುದು. ಭತ್ತದ ಎರಡನೇ ಬೆಳೆಗೆ ನೀರು ಕೊಡದಿರಲು ತೀರ್ಮಾನಿಸಿ, ಕುಡಿಯುವ ನೀರಿಗಾಗಿ ಕೆರೆಕಟ್ಟೆೆ ತುಂಬಿಸುವುದು ಹಾಗೂ ಇತರೆ ಉಪಯೋಗಕ್ಕಾಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು ಎಂದು ಹೇಳಿದರು.
ಜಲಾಶಯದಲ್ಲಿನ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿಿದೆ. ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಗೆ ಡಿ1ರಿಂದ ಜ.10ರವರೆಗೆ ಬೆಳೆದು ನಿಂತ ಬೆಳೆಗಳಿಗೆ 3000 ಕ್ಯೂಸೆಕ್ ನಂತೆ, ಎಡದಂಡೆ ವಿಜಯನಗರ ಕಾಲುವೆಗೆ ಜ.1ರಿಂದ ಮೇ 10ರವರೆಗೆ 150 ಕ್ಯೂಸೆಕ್ ನಂತೆ ವಿತರಣಾ ಕಾಲುವೆ 1ರಿಂದ 11ಎ ರವರೆಗೆ ನೀರು ಹರಿಸಲಾಗುವುದು ತಿಳಿಸಿದರು.
ತುಂಗಭದ್ರಾಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ಜ.10ರವರೆಗೆ 1300 ಕ್ಯೂಸೆಕ್ ನಂತೆ, ತುಂಗಭದ್ರಾಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ.1ರಿಂದ ಜ.10ರವರೆಗೆ 750 ಕ್ಯೂಸೆಕ್ ನಂತೆ, ರಾಯ ಬಸವಣ್ಣ ಕಾಲುವೆಗೆ ಜ.1ರಿಂದ ಮೇ 31ರವರೆಗೆ ಸರಾಸರಿ 250 ಕ್ಯೂಸೆಕ್, ಇನ್ನು ತುಂಗಭದ್ರಾಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 25 ಕ್ಯೂಸೆಕ್ ನಂತೆ ಅಥವಾ ನೀರಿನ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ವಿವರಿಸಿದರು.
ತುಂಗಭದ್ರಾಾ ಮಂಡಳಿ, ಕೇಂದ್ರ ಸರ್ಕಾರ ಮತ್ತು ನೀರಾವರಿ ತಜ್ಞರ ಸಲಹೆ ಮೇರೆಗೆ ಜಲಾಶಯದ ಎಲ್ಲಾ 33 ಗೇಟ್ಗಳನ್ನು ಬದಲಾಯಿಸಿ ಹೊಸ ಗೇಟ್ ಅಳವಡಿಸಲಾಗುವುದು. ಇದಕ್ಕಾಾಗಿ ಗುಜರಾತ್ನ ಕಂಪನಿಯೊಂದಕ್ಕೆೆ ತುಂಗಭದ್ರಾಾ ಮಂಡಳಿಯೇ ಟೆಂಡರ್ ಹಂಚಿಕೆ ಮಾಡಿದೆ. ಡಿಸೆಂಬರ್ ಎರಡನೇ ವಾರದಿಂದ ಹೊಸ ಗೇಟ್ ಅಳವಡಿಕೆ ಪ್ರಾಾರಂಭವಾಗಲಿದ್ದು, ಆರು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಜೂನ್ಗೆ ಮುಂಗಾರು ಪ್ರಾಾರಂಭವಾಗುವ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕೆಲ ಕಾಲುವೆಗಳ ದುರಸ್ತಿಿ ಹಾಗೂ ಇನ್ನಿಿತರ ಅಣೆಕಟ್ಟೆೆಯ ಸಂಪುರ್ಣ ಸಣ್ಣ ದುರಸ್ತಿಿಗಳನ್ನು ಇದೇ ಸಂದರ್ಭದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ತುಂಗಭದ್ರಾಾ ಜಲಾಶಯ 105 ಟಿಎಂಸಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದ್ದರೂ ಸಹ ಕ್ರಸ್ಟ್ಗೇಟ್ಗಳು ಭದ್ರತೆ ದೃಷ್ಟಿಿಯಿಂದ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ತಜ್ಞರು ಸಲಹೆ ನೀಡಿದ್ದರು. ಹೀಗಾಗಿ ಹೊಸ ಕ್ರಸ್ಟ್ಗೇಟ್ಅಳವಡಿಕೆಯಾದಲ್ಲಿ ಮುಂದಿನ ವರ್ಷ 105 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ದೊರೆಯುತ್ತದೆ ಎಂದು ಹೇಳಿದರು.
ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ:
ನಮಗೆ ರೈತರ ಹಿತ ಮುಖ್ಯ. ಅದರ ಜೊತೆಗೆ ಭವಿಷ್ಯದ ದೃಷ್ಟಿಿಯಿಂದ ಅಣೆಕಟ್ಟೆೆಯ ರಕ್ಷಣೆ ಕೂಡ ಬಹಳ ಮುಖ್ಯ. ನಾಲ್ಕು ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರ ಒಮ್ಮತದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಜಲಾಶಯದ ಕ್ರಸ್ಟ್ ಗೇಟ್ ಮುರಿದ ಸಂದರ್ಭದಲ್ಲಿ ಬೋರ್ಡ್ ನವರು ಅನುದಾನ ಕೊಡದಿದ್ದರೂ ರಾಜ್ಯ ಸರ್ಕಾರವೇ ಸಂಪೂರ್ಣ ಹಣ ವ್ಯಯಿಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಆ ವೇಳೆ ಬಿಜೆಪಿ ರಾಜ್ಯಾಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಹಾದಿಯಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಗೇಟ್ ಅಳವಡಿಕೆ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಿಯಿಸಿದರು.
ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಾಳ್, ಶಾಸಕರಾದ ಡಾ.ಶಿವರಾಜ್ ಪಾಟೀಲ್, ಗವಿಯಪ್ಪ, ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಾಳ್, ಹಂಪನಗೌಡ ಬಾದರ್ಲಿ, ನಾಗೇಂದ್ರ, ಗಣೇಶ್, ಜನಾರ್ಧನ ರೆಡ್ಡಿಿ, ಜಿ. ಹಂಪಯ್ಯ ನಾಯಕ್, ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ, ಎಂಎಲ್ಸಿಿಗಳಾದ ವಸಂತಕುಮಾರ್, ಬಸವನಗೌಡ ಬಾದರ್ಲಿ, ಹೇಮಲತಾ ನಾಯಕ್ ಸೇರಿ ಮತ್ತಿಿತರರು ಭಾಗವಹಿಸಿದ್ದರು.
ಕೋಟ್ : 01..
ಎರಡನೇ ಬೆಳೆಗೆ ರೈತರಿಗೆ ನೀರು ಕೊಡದಿದ್ದರೆ ನದಿಗೆ ಹಾರಿ ಆತ್ಮಹತ್ಯೆೆ ಮಾಡಿಕೊಳ್ಳುವುದಾಗಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಶ್ರೀರಾಮುಲು ಅವರು ನನ್ನ ಸಹೋದರರಿದ್ದಂತೆ. ಹಾಗಾಗಿ ನೀರಿಗೆ ಹಾರುವುದು ಬೇಡ.
– ಶಿವರಾಜ ತಂಗಡಗಿ, ಸಚಿವ
ಕೋಟ್ : 02
ರೈತರಿಗೆ ಒಂದು ಬೆಳೆಯಲ್ಲಿ ಕೊರತೆಯಾದರೂ ಭವಿಷ್ಯದಲ್ಲಿ ಜಲಾಶಯದ ಭದ್ರತೆ ಮುಖ್ಯ. ಹೊಸ ಗೇಟ್ಗಳ ಅವಳಡಿಕೆ ಕಾರ್ಯ ವಿಳಂಬ ಆಗಬಾರದು. ಅಲ್ಲದೆ, ಇದೇ ಸಮಯ ಬಳಸಿಕೊಂಡು ಎಲ್ಲಾ ಕಾಲುವೆಗಳ ದುರಸ್ತಿಿ ಮಾಡಲು ಸರ್ಕಾರಕ್ಕೆೆ ಸಲಹೆ ನೀಡಲಾಗಿದೆ.
– ಹನುಮನಗೌಡ ಬೆಳಗುರ್ಕಿ, ರೈತ ಮುಖಂಡ
ಜಲಾಶಯದ ಭದ್ರತೆಯೇ ಮುಖ್ಯ: ಭೋಸರಾಜು
ಈ ಬಾರಿ ಒಂದೇ ಬೆಳೆಗೆ ಮಾತ್ರ ನೀರು ಒದಗಿಸಿ ಆಣೆಕಟ್ಟೆೆಯ ಗೇಟ್ ಬದಲಾವಣೆಗೆ ಒತ್ತು ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ಈ ಬಾರಿ ಒಂದು ಬೆಳೆಗೆ ನೀರು ಒದಗಿಸಿ, ಉಳಿದಿದ್ದನ್ನು ಕುಡಿಯುವ ನೀರಿಗಾಗಿ ಮೀಸಲಾಗಿಟ್ಟು ಗೇಟ್ ಬದಲಾವಣೆಗೆ ಆದ್ಯತೆ ನೀಡಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ಸಭೆಯ ಬಳಿಕ ‘ಸುದ್ದಿಮೂಲ’ ಜೊತೆ ಮಾತನಾಡಿದ ಅವರು, ಹೊಸ ಗೇಟ್ ಅಳವಡಿಕೆ ಉದ್ದೇಶದಿಂದ ಈಗಾಗಲೇ 13 ಗೇಟ್ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಇದಕ್ಕೆೆ ಹಣ ಒದಗಿಸಬೇಕು. ಒಂದು ವೇಳೆ ವಿಳಂಬವಾದಲ್ಲಿ ನಮ್ಮ ಸರ್ಕಾರದಿಂದ ಹಣ ಒದಗಿಸಿ ಬಳಿಕ ಅದನ್ನು ಗುತ್ತಿಿಗೆದಾರರಿಂದ ಮರಳಿ ಪಡೆಯಬಹುದೇ ಎಂದೂ ಸಹ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜ್ಯ ಸರ್ಕಾರದ ಪಾಲುದಾರಿಕೆಯಾಗಿ ಎಷ್ಟೇ ಹಣ ಖರ್ಚಾದರೂ ಅದನ್ನು ಒದಗಿಸಲು ಸಿದ್ಧ ಎಂದು ಹೇಳಿದರು.
ಜಲಾಶಯದ ಎಲ್ಲಾ ನಿಯಂತ್ರಣ ತುಂಗಭದ್ರಾಾ ಬೊರ್ಡ್ ಮತ್ತು ಕೇಂದ್ರ ಸರ್ಕಾರದ ಬಳಿ ಇದೆ. ಇಂದಿನ ಸಭೆಯಲ್ಲಿ ಎಲ್ಲಾ ರೈತರು ಮತ್ತು ಎಲ್ಲಾ ಪಕ್ಷಗಳ ನಾಯಕರು ಆಣೆಕಟ್ಟೆೆಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ನಿರ್ಣಯಯಿಸಲಾಗಿದೆ. ಹೀಗಾಗಿ ಡಿಸೆಂಬರ್ನಿಂದಲೇ ಕಾಮಗಾರಿಗೆ ಚಾಲನೆ ಕೊಟ್ಟು ಎಲ್ಲಾ ಗೇಟ್ಗಳನ್ನು ಹಂತಹಂತವಾಗಿ ಅಳವಡಿಸುವ ಮೂಲಕ ಮುಂದಿನ ಜೂನ್ ವೇಳೆಗೆ ಎಲ್ಲಾ ಗೇಟ್ಗಳ ಬದಲಾವಣೆ ಮಾಡಿ ಹೊಸ ಮುಂಗಾರು ಆರಂಭದ ವೇಳೆಗೆ ಜಲಾಶಕ್ಕೆೆ ಹೊಸ ಗೇಟ್ಗಳ ಅಳವಡಿಕೆ ಕಾಮಗಾರಿ ಮುಗಿಸಿ ಮುಂದಿನ ವರ್ಷಕ್ಕೆೆ ಅನುಕೂಲವಾಗುವಂತೆ ಜಲಾಶಯದ ಪೂರ್ಣಮಟ್ಟದ ನೀರು ಹಿಡಿದಿಟ್ಟುಕೊಳ್ಳಲು ಸಿದ್ಧತೆ ನಡೆಸಲಾಗುವುದು ಎಂದು ಸಚಿವ ಭೋಸರಾಜು ಹೇಳಿದರು.
ಹೊಸ ಕ್ರಸ್ಟ್ಗೇಟ್ಗಳ ಅಳವಡಿಕೆಗೆ ಒತ್ತು/ ಡಿಸೆಂಬರ್ನಿಂದ ಜೂನ್ ವೇಳೆಗೆ ಎಲ್ಲಾ 33 ಗೇಟ್ಗಳ ಬದಲಾವಣೆ/ ತುಂಗಭದ್ರಾಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ತುಂಗಭದ್ರಾಾ: ಎರಡನೇ ಬೆಳೆಗೆ ನೀರಿಲ್ಲ

