ಪಂಚಮಸಾಲಿ ಮಹಿಳಾ ಘಟಕದಿಂದ ಪರಿಸರ ದಿನಾಚರಣೆ
ಸುದ್ದಿಮೂಲವಾರ್ತೆ
ಕೊಪ್ಪಳ ಜೂ 19; ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕೊಪ್ಪಳ ಜಿಲ್ಲಾ ಮಹಿಳಾ ಘಟಕದಿಂದ ಇತ್ತಿಚಿಗೆ ತಾಲೂಕಿನ ಯತ್ನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಸಸಿ ನೆಡುವದರ ಮೂಲಕ ಆಚರಿಸಲಾಯಿತು.
ಜಿಲ್ಲಾಧ್ಯಕ್ಷೆ ಶ್ರೀಮತಿ ಸುಮಂಗಲಾ. ಎಸ್.ಹಂಚಿನಾಳ, ಪರಿಸರದ ಸಮಸ್ಯೆಗಳು ಹಾಗೂ ಅವುಗಳ ನಿವಾರಣೆಯ ಕುರಿತು ಮಾತನಾಡಿದರು.
ಗೌರವಾದ್ಯಕ್ಷೆ ಶ್ರೀಮತಿ ಶಿವಲೀಲಾ ಪಾಟೀಲ್ ಮಕ್ಕಳಿಗೆ ಧ್ಯಾನದ ಪ್ರಯೋಜನಗಳ ಕುರಿತು ಮಾಹಿತಿ ನೀಡಿ, ಕೆಲವು ಸಮಯ ಧ್ಯಾನ ಮಾಡಿಸಿದರು.ಪ್ರಧಾನ ಕಾರ್ಯದರ್ಶಿ ಗಿರಿಜಾ ಪೋಲಿಸ್ ಪಾಟೀಲ್, ಸಹಕಾರ್ಯದರ್ಶಿ ಲತಾ ಪಟ್ಟಣಶೆಟ್ಟಿ ತಮ್ಮ ಧ್ಯಾನದ ಅನುಭವ ಹಂಚಿಕೊಂಡರು.ಪರಿಸರ ರಕ್ಷಣೆ ಹಾಗೂ ಅದರ ಮಹತ್ವ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ತಾಲೂಕು ಘಟಕದ ಗೌರವಾಧ್ಯಕ್ಷೆ ಶ್ರೀಮತಿ ರತ್ನಾ ಪಾಟೀಲ್, ಮಕ್ಕಳಿಗೆ ಮರಗಳನ್ನು ಬೆಳೆಸಿ ಪೋಷಿಸಲು ಸಲಹೆ ನೀಡಿದರು.ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಖಾ ಸಂಗಳ, ಉಪಾಧ್ಯಕ್ಷೆ ಶ್ರೀಮತಿ ಗೀತಾ ಹಟ್ಟಿ, ಶ್ರೀಮತಿ ಗಂಗಮ್ಮ, ಶ್ರೀಮತಿ ನಾಗರತ್ನ, ಶ್ರೀಮತಿ ಲತಾ ದೇಸಾಯಿ ಹಾಗೂ ಗ್ರಾಮದ ಅನೇಕ ಸಹೋದರಿಯರು ಉಪಸ್ತಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.ಕೊನೆಯಲ್ಲಿ ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.