ಸುದ್ದಿಮೂಲ ವಾರ್ತೆ
ಆನೇಕಲ್, ಸೆ.16 : ಪಿಓಪಿ ಬದಲು , ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯನ್ನು ಸಾರ್ವಜನಿಕರು ಬಳಸುವಂತೆ ಪೌರಾಯುಕ್ತ ಕೆ. ನರಸಿಂಹಮೂರ್ತಿ ಹೇಳಿದರು.
ಹೆಬ್ಬಗೋಡಿ ಪ್ರೌಢಶಾಲೆ ಯಲ್ಲಿ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಹೆಬ್ಬಗೋಡಿ ನಗರಸಭೆ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮನೆಯಲ್ಲಿ ಮತ್ತು ಬೀದಿಗಳಲ್ಲಿ ಗಣೇಶ ಹಬ್ಬ ಆಚರಿಸುವಾಗ ಪ್ಲಾಸ್ಟಿಕ್ ಬಳಕೆ ಮಾಡದೆ ಸ್ವಚ್ಛತೆಯನ್ನು ಕಾಪಾಡುವಂತೆ ಹಸಿ ಕಸ, ಒಣ ಕಸ ವಿಂಗಡಿಸಿ ಸಾರ್ವಜನಿಕರು ಪೌರಕಾರ್ಮಿಕ ರಿಗೆ ನೀಡಬೇಕು. ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು ಎಂದರು.
ನಾಳೆ ಗೌರಿ -ಗಣೇಶ ಹಬ್ಬದ ಪ್ರಯುಕ್ತ ನಡೆಯಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಸ್ವಚ್ಛತೆಯನ್ನು ಕಾಪಾಡಲು ಮಾಲಿನ್ಯವನ್ನು ತಡೆಗಟ್ಟಲು ಹೆಬ್ಬಗೋಡಿ ನಗರಸಭೆ ಮುಂದಾಗಿದೆ.
ಇದೇ ಸಂದರ್ಭದಲ್ಲಿ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಪತ್ರಕರ್ತರಾದ ಊಗಿನಹಳ್ಳಿ ಮಹೇಶ್, ಶಾಲೆಯ ಶಿಕ್ಷಕರಾದ ಕೃಷ್ಣರೆಡ್ದಿ ಸರ್ಕಲ್ ಹೆಬ್ಬ ಗೋಡಿ ವೃತ್ತ ನಿರೀಕ್ಷಕರಾದ ಅಯ್ಯಣ್ಣ ರೆಡ್ಡಿ , ಹಿರಿಯ ಆರೋಗ್ಯ ಅಧಿಕಾರಿಗಳಾದ ಭಾಗ್ಯಮ್ಮ, ಆರೋಗ್ಯ ಅಧಿಕಾರಿಗಳಾದ ಅನುಶ್ರೀ, ಮಂಗಳ ಗೌರಿ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು