ಸೂಲಿಬೆಲೆ, ಜು 27 : ನೈಸರ್ಗಿಕ ಪರಿಸರ ಹಾಗೂ ಅಳಿವಿನಂಚಿಲ್ಲಿರುವ ಪ್ರಾಣಿಸಂಕುಲ ಉಳಿಯಬೇಕಾದರೆ ಪರಿಸರವನ್ನು ರಕ್ಷಿಸುವುದು ನ್ಮಮೆಲ್ಲರ ಜವಾಬ್ದಾರಿ ಎಂದು ಆಕ್ಸೋನೊಬೆಲ್ ಕಂಪನಿಯ
ಮ್ಯಾನೇಜರ್ ಜೋಯಿಸ್ ಹೇಳಿದರು.
ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿಆಕ್ಸೋನೊಬೆಲ್ ಕಂಪನಿ ಹಾಗೂ ಅಪ್ಸಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ಸಂರಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಲು ಶುದ್ದ ಗಾಳಿ, ನೀರು, ಆಹಾರ ಸಿಗುವಂತಾಗಬೇಕು. ಗಿಡ, ಮರ, ಪಕ್ಷಿ ಮತ್ತು ಪ್ರಾಣಿಸಂಕುಲದ ಸಮತೋಲನ ಕಾಪಾಡುವ ಜವಾಬ್ದಾರಿ ಸಹ ನಮ್ಮದಾಗಬೇಕು
ಆರೋಗ್ಯಕರ ಪರಿಸರದಿಂದ ಆರೋಗ್ಯಕರ ಸಮಾಜಕ್ಕೆ ಅಡಿಪಾಯವಾಗಲಿದೆ ಎಂದರು.
ಡಾ.ಶಿವರಂಜನಿ ಮಾತನಾಡಿ, ಮಾನವರ ಸ್ವಾರ್ಥದಿಂದ ಪರಿಸರ ಕಾಳಜಿ ನಶಿಸುತ್ತಿದೆ. ದಿನೇ ದಿನೇ
ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರು ಗಿಡ ನೆಡುವ ಸಂಕಲ್ಪ ಮಾಡಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಬೇಕು. ಮರಗಳ ನಾಶ, ನೀರಿನ
ದುರ್ಬಳಕೆ, ಭೂಮಿ ಬರಡಾಗುವ ಮೊದಲೇ ನಾವೆಲ್ಲರೂ ನೈಸರ್ಗಿಕ ಸಂಪತ್ತನ್ನು ರಕ್ಷಿಸೋಣ ಎಂದು ಕರೆ ನೀಡಿದರು.
ಆಕ್ಸೋನೊಬೆಲ್ ಕಂಪನಿಯ ವ್ಯವಸ್ಥಾಪಕ ಜೀವನ್, ಐಶ್ವರ್ಯ,ಸಾಗರ್, ಮುಖ್ಯಶಿಕ್ಷಕ ಕೃಷ್ಣಕುಮಾರ್, ಸಹ ಶಿಕ್ಷಕರಾಧ ವಿಜಯಕುಮಾರ್,ಜ್ಯೋತಿ,ಕಮಲ,ವೀಣಾ,