ಸೂಲಿಬೆಲೆ: ಸಕಲ ಜೀವರಾಶಿಗಳು ನಿರಾಳವಾಗಿ ಜೀವಿಸಬೇಕಾದರೆ ಅಮ್ಲಜನಕದ ಅವಶ್ಯಕತೆ ಇದೆ. ಅದರಂತೆ ನಮ್ಮ ಪ್ರಕೃತಿ ಮತ್ತು ಪರಿಸರ ಶುದ್ಧವಾಗಿದ್ದರೆ ಮಾತ್ರ ಸಕಲ ಜೀವರಾಶಿಗಳು ಆರೋಗ್ಯವಾಗಿರಲು ಸಾಧ್ಯ.
ಇಂತಹ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸ೦ಘದ ಜಿಲ್ಲಾಧ್ಯಕ್ಷ ಎಂ.ಶ್ರೀನಿವಾಸಪ್ಪ ಹೇಳಿದರು. ಹೋಬಳಿಯ ದೊಡ್ಡಹರಳಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಯಂ ಪ್ರೇರಿತರಾಗಿ ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಡಿ.ಟಿ.ವೆಂಕಟೇಶ್ ಮಾತನಾಡಿ, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆ ಬಿಡಬೇಕು. ಭೂಮಿಯ ಉಳಿವಿಗಾಗಿ ಭವಿಷ್ಯದ ಜೀವನಕ್ಕಾಗಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ನಾವುಗಳೇ ಪ್ರತಿಜ್ಞೆ ತೊಡಬೇಕು ಎಂದರು. ಶಾಲಾ ಉಪಾಧ್ಯಕ್ಷೆ ರಾಜಮ್ಮ, ಚನ್ನಕೇಶವ, ಕಲಾ, ಲಲಿತಮ್ಮ, ರೇಖಾ ಹಾಗು ಪೋಷಕರು ಹಾಜರಿದ್ದರು.