ಸುದ್ದಿಮೂಲ ವಾರ್ತೆ ಬೆಂಗಳೂರು, ಅ.15:
ರಾಜ್ಯ ಸರ್ಕಾರ ಎಸ್ಸೆೆಸ್ಸೆೆಲ್ಸಿಿ ಮತ್ತು ಪಿಯುಸಿ ಪರೀಕ್ಷೆಯ ಕನಿಷ್ಠ ಉತ್ತೀರ್ಣ ಅಂಕಗಳನ್ನು ಕಡಿತಗೊಳಿಸಿ ಶೇ.35ರಿಂದ ಶೇ.33ಕ್ಕೆೆ ಇಳಿಸಿದೆ.
ಸರ್ಕಾರ ಕೈಗೊಂಡ ಈ ನಿರ್ಧಾರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಅವರು ಪತ್ರಿಿಕಾಗೋಷ್ಠಿಿಯಲ್ಲಿ ಘೋಷಿಸಿದರು.
ವಿದ್ಯಾಾರ್ಥಿಗಳ ಉತ್ತೀರ್ಣತೆಯ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಿಸಲು ಮತ್ತು ಕೇಂದ್ರ ಪಠ್ಯ ಕ್ರಮ (ಸಿಬಿಎಸ್ಇ) ರಾಷ್ಟ್ರೀಯ ಸಂಸ್ಥೆೆಗಳೊಂದಿಗೆ ರಾಜ್ಯದ ಮಾನದಂಡಗಳ ಹೊಂದಾಣಿಕೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಶಿಾರಸನ್ನು ಆಧರಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ: ಹೊಸ ನಿಯಮವು 2025-26ರ ಶೈಕ್ಷಣಿಕ ವರ್ಷದಿಂದ ಎಲ್ಲಾ ನಿಯಮಿತ, ಪುನರಾವರ್ತಿತ ಮತ್ತು ಖಾಸಗಿ ವಿದ್ಯಾಾರ್ಥಿಗಳಿಗೆ ಜಾರಿಗೆ ಬರಲಿದೆ. ಈ ತಿದ್ದುಪಡಿಯನ್ನು ಬೆಂಬಲಿಸಿ 701 ಪತ್ರಗಳನ್ನು ಸ್ವೀಕರಿಸಲಾಗಿದ್ದು, ಕರಡು ಅಧಿಸೂಚನೆ ಪ್ರಕ್ರಿಿಯೆಯನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಹೊಸ ಮಾನದಂಡಗಳ ಪ್ರಕಾರ, ಎಸ್ಎಸ್ಎಲ್ಸಿಿ ವಿದ್ಯಾಾರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡನ್ನೂ ಒಟ್ಟುಗೂಡಿಸಿ ಒಟ್ಟಾಾರೆಯಾಗಿ ಕನಿಷ್ಠ ಶೇ. 33ರಷ್ಟು (625 ರಲ್ಲಿ 206 ಅಂಕಗಳು) ಅಂಕಗಳು ಹಾಗೂ ಆಯಾ ವಿಷಯಗಳಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು.
ದ್ವಿಿತೀಯ ಪಿಯುಸಿ ವಿದ್ಯಾಾರ್ಥಿಗಳು ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ.30ರಷ್ಟು ಅಂಕಗಳು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು (ಲಿಖಿತ ಮತ್ತು ಪ್ರಾಾಯೋಗಿಕ/ಆಂತರಿಕ ಅಂಕಗಳನ್ನು ಒಳಗೊಂಡಂತೆ) ಗಳಿಸಬೇಕು. ಜೊತೆಗೆ, ಒಟ್ಟಾಾರೆ ಶೇ. 33ರಷ್ಟು (600 ರಲ್ಲಿ 198) ಅಂಕಗಳನ್ನು ಪಡೆಯಬೇಕಾಗಿದೆ.
ವಿದ್ಯಾಾರ್ಥಿಗಳ ಉತ್ತೀರ್ಣತಾ ಪ್ರಮಾಣವನ್ನು ಹೆಚ್ಚಿಿಸುವುದು ಮತ್ತು ಸಿಬಿಎಸ್ಇ ಮತ್ತು ಇತರ ರಾಜ್ಯಗಳ ಉತ್ತೀರ್ಣ ಮಾನದಂಡಗಳಿಗೆ ಹೊಂದಿಕೆಯಾಗುವ ಏಕರೂಪದ ವ್ಯವಸ್ಥೆೆಯನ್ನು ಜಾರಿಗೆ ತರುವ ಗುರಿ ಇದಾಗಿದೆ. ಹೀಗಾಗಿ, ಉತ್ತೀರ್ಣ ಅಂಕಗಳನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
800 ಕೆಪಿಎಸ್ ಶಾಲೆಗಳು
ರಾಜ್ಯದ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಸಾರ್ವಜನಿಕ ಶಾಲೆಗಳಾಗಿ (ಕೆಪಿಎಸ್) ಏಕಕಾಲದಲ್ಲಿ ಮೇಲ್ದರ್ಜೆಗೇರಿಸುವ ಮಹತ್ವದ ಘೋಷಣೆ ಮಾಡಲಾಗಿದೆ. ಈ ಮೂಲಕ ಸರ್ಕಾರ ಕ್ರಾಾಂತಿಕಾರಿ ಹೆಜ್ಜೆೆ ಇಟ್ಟಿಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಪೂರ್ವ ಪ್ರಾಾಥಮಿಕದಿಂದ ದ್ವಿಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಶಾಲಾ ಶಿಕ್ಷಣ ವಲಯವನ್ನು ಬಲಪಡಿಸಲು ಈ ಉಪ ಕ್ರಮದ ಮೊರೆ ಹೋಗಲಾಗಿದೆ. ಪ್ರತಿಯೊಂದು ಶಾಲೆಯನ್ನು 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಿಪಡಿಸಲಾಗುವುದು ಎಂದರು.