ರಾಮನಗರ,ಜೂ.29 : ನಗರದ ಐಜೂರು ನೀರಿನ ಟ್ಯಾಂಕ್ ಬಳಿಯ ಮಲ್ಲೇಶ್ವರ ಬಡಾವಣೆಯಲ್ಲಿ ಅಮೃತ ವಿಕಲಚೇತನ ಟ್ರಸ್ಟ್ ವತಿಯಿಂದ ಫಿಜಿಯೋಥೆರಫಿ ಕೇಂದ್ರ ಆರಂಭವಾಗಿದೆ.
ವಿಕಲಚೇತನರು ಮತ್ತು ವೈದ್ಯರ ಸಲಹೆ ಮೇರೆಗೆ ಸಾಮಾನ್ಯರಿಗೂ ಫಿಜಿಯೋಥೆರಪಿ ಅಗತ್ಯವಿದ್ದು, ಜಿಲ್ಲೆಯ ಜನರಿಗೆ ಈ ಸೌಕರ್ಯವನ್ನು ಒದಗಿಸುವ ಉದ್ದೇಶದಲ್ಲಿ ಅಮೃತ ವಿಕಲಚೇತನ ಟಸ್ಟ್ ಫಿಜಿಯೋಥೆರಫಿ ಮತ್ತು ರಿಹಾಬಿಲೇಷನ್ ಕೇಂದ್ರವನ್ನು ಸ್ಥಾಪಿಸಿದೆ.
ನೂತನ ಕೇಂದ್ರವನ್ನು ಶಾಸಕ ಎಚ್.ಎ.ಇಕ್ಬಾಲ್ಹುಸೇನ್ ಉದ್ಘಾಟಿಸಿದರು.
ಟ್ರಸ್ಟ್ ಕಾರ್ಯದರ್ಶಿ ರಮೇಶ್ ಮಾತನಾಡಿ, ಫಿಜಿಯೋಥೆರಫಿ ಅವಶ್ಯಕತೆಯಿರುವ ನಾಗರೀಕರು ಬೆಂಗಳೂರು ಮುಂತಾದ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ ಹತ್ತಿರದಲ್ಲಿಯೇ ಸೇವೆ ಒದಗಿಸುವುದು ನಮ್ಮ ಟ್ರಸ್ಟಿನ ಉದ್ದೇಶವಾಗಿದೆ ಎಂದರು.
ರೋಟರಿ ಕ್ಲಬ್ ಸಮುದಾಯ ಸೇವೆಯ ನಿರ್ದೇಶಕ ಅರವಿಂದ್ನಾಯ್ಡು, ಸಿದ್ದಪ್ಪಾಜಿ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ನಾಗವೇಣಿ, ಅಮೃತ ವಿಕಲಚೇತನ ಟ್ರಸ್ಟ್ ಅಧ್ಯಕ್ಷ ಆರ್.ನಿರಂಜನ್, ಡಾ.ಪುಂಡಲೀಕ ಕಾಮತ್, ರೋಟರಿ ಸಿಲ್ಕ್ ಸಿಟಿ ಕ್ಲಬ್ ಅಧ್ಯಕ್ಷ ಆರ್.ಶಿವರಾಜು ಮತ್ತಿತರರು ಇದ್ದರು.