ಸುದ್ದಿಮೂಲ ವಾರ್ತೆ ಕನಕಗಿರಿ, ನ.30:
ತಾಲೂಕಿನ ಜೀರಾಳ ಗ್ರಾಾಮದಲ್ಲಿ ಬಂಗಾಳಿ ಮೂಲದ ನಕಲಿ ವೈದ್ಯ ಅಭಿ ಕುಮಾರ್ ಅಭಿರಾಮ್ ಲೈಸೆನ್ಸ್ ರಹಿತವಾಗಿ ಔಷಧ ಮಾರಾಟ ಮಾಡುತ್ತಿಿರುವ ಮಾಹಿತಿಯನ್ನು ಅನಾಮಧೇಯ ನೀಡಿದ ದೂರು ಆಧರಿಸಿ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ್ ಪರವಾನಿಗೆ ರಹಿತ ಔಷಧ ವ್ಯಾಾಪಾರಿಯ ಆಸ್ಪತ್ರೆೆಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಔಷಧಗಳು ಪತ್ತೆೆಯಾದರೂ ಸಾರ್ವಜನಿಕರ ಅಡೆತಡೆಯಿಂದಾಗಿ ನಕಲಿ ವೈದ್ಯ ಸಂಗ್ರಹಿಸಿಕೊಂಡಿದ್ದ ಔಷಧಗಳನ್ನು ದಸ್ತಗೀರ ಮಾಡಲು ಅವರಿಗೆ ಅವಕಾಶವಾಗಿರಲಿಲ್ಲ.
ನಂತರ ಬಳ್ಳಾಾರಿ ವಿಭಾಗದ ಉಪ ಔಷಧ ನಿಯಂತ್ರಕ ರಾಜಶೇಖರ ಮಲ್ಲಿ ಅವರ ಆದೇಶದ ಮೇರೆಗೆ ಬಳ್ಳಾಾರಿ ವೃತ್ತದ ಇಬ್ಬರು ಸಹಾಯಕ ಔಷಧ ನಿಯಂತ್ರಕರು ಮತ್ತು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರು ಸೇರಿ ಮತ್ತೊೊಮ್ಮೆೆ ಜೀರಾಳ ಗ್ರಾಾಮದ ನಕಲಿ ವೈದ್ಯನ ಆಸ್ಪತ್ರೆೆಯ ಮೇಲೆ ಮೂರು ಜನರ ಅಧಿಕಾರಿಗಳ ತಂಡ ದಾಳಿ ಮಾಡಿದೆ.ಆಗ ಆಸ್ಪತ್ರೆೆ ಮತ್ತು ಆತ ವಾಸಿಸಿದ್ದ ಮನೆಯಲ್ಲಿಯೂ ಅಲೋಪತಿ ಔಷಧಗಳು ಕಂಡು ಬಂದಿವೆ. ಪುನಃ ಅವುಗಳನ್ನು ಸೀಜ್ ಮಾಡಲು ಅಲ್ಲಿನ ಗ್ರಾಾಮಸ್ಥರು ಪುನಃ ಅಡ್ಡಿಿ ಪಡಿಸಿದ್ದಾಾರೆ. ಸ್ಥಳಕ್ಕೆೆ ಪೊಲೀಸ್ ೆರ್ಸ್ ತೆಗೆದುಕೊಂಡು ಹೋಗುವುದರಲ್ಲಿ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದು, ಇಲ್ಲಿ ಕರ್ತವ್ಯಕ್ಕೆೆ ಚ್ಯುತಿಯಾಗಿದೆ.
ಸರಕಾರಿ ನೌಕರರ ಕರ್ತವ್ಯಕ್ಕೆೆ ಅಡ್ಡಿಿ ಪಡಿಸಿದ ಕಾರಣಕ್ಕೆೆ ಅಧಿಕಾರಿಗಳು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಬಂದಿದ್ದಾಾರೆ.ಕೇವಲ ದೂರನ್ನು ದಾಖಲಿಸಿಕೊಂಡ ಅಲ್ಲಿನ ಪೊಲೀಸ್ ಎ್ಐಅರ್ ಮಾಡಿಲ್ಲ. ಅದಕ್ಕಾಾಗಿ ಎ.ಡಿ.ಸಿ. ವೆಂಕಟೇಶ ರಾಠೋಡ್ ಕೊಪ್ಪಳದ ಎಸ್.ಪಿ.ಅವರನ್ನು ಕಂಡು ಪ್ರಕರಣದ ಬಗ್ಗೆೆ ವಿವರಿಸಿದ್ದಾಾರೆ. ಕ್ಲಾಾಸ್-1 ಗ್ರೇೇಡ್ ಅಧಿಕಾರಿಗಳಾದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಂದ ಲಿಖಿತ ರೂಪದಲ್ಲಿ ದೂರು ನೀಡಲು ಕನಕಗಿರಿ ಪೊಲೀಸ್ ಇನ್ಸಪೆಕ್ಟರ್ ಕೇಳಿ ಪಡೆದದ್ದು, ಕೇವಲ ಇಬ್ಬರು ಪೇದೆಗಳನ್ನು ರಕ್ಷಣೆಗೆ ಕಳುಹಿಸಿದ್ದು, ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಕರ್ತವ್ಯ ಪಾಲನೆಗೆ ಆಸ್ಪದವಾಗಿಲ್ಲ.
ಇದೇ ರೀತಿ ಎ.ಡಿ.ಸಿ.ಯವರು ಕೊಪ್ಪಳದ ಜಿಲ್ಲಾಾಧಿಕಾರಿಯನ್ನೂ ಸಹ ಕಂಡು ಜೀರಾಳ ಗ್ರಾಾಮದಲ್ಲಿ ನಡೆದ ಘಟನೆಯ ಬಗ್ಗೆೆ ಮಾಹಿತಿ ನೀಡಿದ್ದಾಾರೆ.
ಈ ಬಗ್ಗೆೆ ಜಿಲ್ಲಾಾಡಳಿತ ಯಾವ ರೀತಿ ಕ್ರಮ ಕೈಗೊಳ್ಳುತ್ತೆೆ ಮತ್ತು ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮುಂದಿನ ಕ್ರಮವನ್ನು ಹೇಗೆ ಜರುಗಿಸುತ್ತಾಾರೆ ? ಪರವಾನಿಗೆ ಪಡೆದು ಔಷಧ ವ್ಯಾಾಪಾರ ಮಾಡುತ್ತಿಿರುವ ಔಷಧ ವ್ಯಾಾಪಾರಿಗಳನ್ನು ಯಾವ ರೀತಿ ರಕ್ಷಿಸುತ್ತಾಾರೆ ಕಾಯ್ದು ನೋಡಬೇಕಾಗಿದೆ.
ಇಷ್ಟಾಾದರೂ ಸ್ಥಳಿಯದವನೂ ಅಲ್ಲದ ಬಂಗಾಳಿ ಮೂಲದ ಈ ನಕಲಿ ವೈದ್ಯ ಪುನಃ ಜೀರಾಳ ಗ್ರಾಾಮಕ್ಕೆೆ ಆಗಮಿಸಿದ್ದು, ನಕಲಿ ಚಿಕಿತ್ಸೆೆ ಮತ್ತು ಕಾನೂನು ಬಾಹಿರ ಔಷಧ ಮಾರಾಟದಲ್ಲಿ ನಿರತನಾಗಿದ್ದಾಾನೆ ಎಂದು ಗ್ರಾಾಮಸ್ಥರಿಂದ ತಿಳಿದು ಬಂದಿದೆ.ಕೆ.ಪಿ.ಎಮ್.ಎ.,ಎಂದು ಪದೇ ಪದೆ ಬಡ ಬಡಿಸುವ ತಾಲೂಕು ವೈಧ್ಯಾಾಧಿಕಾರಿ ಮತ್ತು ಜಿಲ್ಲಾಾ ವೈದ್ಯಾಾಧಿಕಾರಿಗಳು ಯಾವ ರೀತಿಯ ಕ್ರಮಕ್ಕೆೆ ಮುಂದಾಗಬಹುದು ಎಂದು ತಿಳಿಯುವುದು ಬಾಕಿ ಇದೆ.
ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ಇಲ್ಲ : ಜೀರಾಳದಲ್ಲಿ ಪರಾರಿಯಾಗಿದ್ದ ನಕಲಿ ವೈದ್ಯ ಪುನಃ ಆಗಮನ

