ಸುದ್ದಿಮೂಲ ವಾರ್ತೆ ಕೊಪ್ಪಳ, ಜ.11:
ವಾರದಕಳೆದ ಸೋ. ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ ಜರುಗಿದೆ. ಈ ಸಂದರ್ಬದಲ್ಲಿ ಸರಿಸುಮಾರು 8 ಲಕ್ಷ ಜನ ಸೇರಿದ್ದರು. ಇದನ್ನು ದಕ್ಷಿಣ ಭಾರತ ಮಹಾಕುಂಭ ಮೇಳ ಎಂದು ಕರೆದರು. ಆದರೆ ಇಂದು ರಥೋತ್ಸವಕ್ಕೆೆ ಸೇರಿದ್ದಕ್ಕೆೆ ಡಬ್ಬಲ್ ಜನ ಸೇರಿದ್ದರು. ಇಡೀ ದಿನ ಗವಿಮಠದ ಆವರಣದಲ್ಲಿ ಜನವೋ ಜನ.
ನಿನ್ನೆೆ ಎರಡನೆಯ ಶನಿವಾರ ಮತ್ತು ಭಾನುವಾರವಾದ ಹಿನ್ನೆೆಲೆಯಲ್ಲಿ ನಿನ್ನೆೆಯಿಂದಲೇ ಜನರು ಗವಿಮಠಕ್ಕೆೆ ಬಂದಿದ್ದರು. ಇಂದು ಬೆಳಗ್ಗಿಿನಿಂದ ನಾಡಿನಾದ್ಯಂತ ಜನರು ಬಸ್, ಸ್ವಂತ ವಾಹನಗಳೊಂದಿಗೆ ಆಗಮಿಸಿದ್ದು ಜಾತ್ರೆೆಯ ಆವರಣದಲ್ಲಿ ಕಾಲಿಡದಷ್ಟು ಜನಜಂಗುಳಿ ಸೇರಿತ್ತು.
ಗವಿಮಠಕ್ಕೆೆ ಬಂದ ಅಪಾರ ಜನ ಬಂದಿರುವ ಹಿನ್ನಲೆ ದೇವರ ಸಶ್ಯಕ್ಕೆೆ ಭಾರಿ ಪ್ರಮಾಣದ ಸಾಲು ಇತ್ತು. ಗವಿಸಿದ್ದೇಶ್ವರ ಸ್ವಾಾಮೀಜಿಗಳು ಇಂದು ಮಧ್ಯಾಾಹ್ನದಿಂದ ಮಠದ ಗರ್ಭ ಗುಡಿಯ ಮುಂದೆ ಇರುವ ಕಟ್ಟೆೆಯಲ್ಲಿ ಕುಳಿತು ಭಕ್ತರಿಗೆ ಆಶೀರ್ವಾದ ಮಾಡಿದರು.
ದಾಸೋಹ ಸೇರಿದಂತೆ ಜಾತ್ರೆೆಯಲ್ಲಿ ಮಾರಾಟ ಮಳಿಗೆಗಳು ಜನರಿಂದ ತುಂಬಿ ತುಳುಕಿದ ಇಂದು ಮುಂಜಾನೆಯಿಂದ ಕೊಪ್ಪಳದ ಬಸವೇಶ್ವರ ವೃತ್ತ, ಗಡಿಯಾರ ಕಂಬ, ಬಸ್ ನಿಲ್ದಾಾಣದಲ್ಲಿ ಟ್ರಾಾಫಿಕ್ ಜಾಮ್ ಉಂಟಾಗಿ ಜಾತ್ರೆೆಗೆ ಬಂದವರು ವಾಪಸ್ಸು ಊರಿಗೆ ಹೋಗಲು ಪರದಾಡುವಂತಾಗಿತ್ತು. ಬಸ್ ಗಳೆಲ್ಲವೂ ುಲ್. ಕೊಪ್ಪಳ ಬಸ್ ನಿಲ್ದಾಾಣದಲ್ಲಿ ನಿಂತುಕೊಳ್ಳಲು ಆಗದಷ್ಟು ಜನ ಇದ್ದರು.
ಮುಂದಿನ ಭಾನುವಾರ ಅಮವಾಸ್ಯೆೆ ಇದೆ. ಭಾನುವಾರದಿಂದ ಜಾತ್ರೆೆ ಬಂದ್ ಆಗುತ್ತಿಿದೆ. ಇದೇ ಕಾರಣಕ್ಕೆೆ ಇಂದು ಸರಕಾರಿ ರಜೆ ಇರುವ ಕಾರಣಕ್ಕೆೆ ಭಾರಿ ಜನ ಸೇರಿದ್ದು ಜನರ ನಿಯಂತ್ರಿಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಮಠದ ಸಿಬ್ಬಂದಿಯೂ ಸಹ ಜನರ ನಿಯಂತ್ರಣ ಮಾಡಲು ಹರಸಾಹಸ ಪಡುವ ಸ್ಥಿಿತಿ ನಿಮಾರ್ಣವಾಗಿತ್ತು.
ಕೊಪ್ಪಳ ; ರಥೋತ್ಸವ ಮುಗಿದರೂ ಜನ ಜಂಗುಳಿ!!

