ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 31 : ಸಮಾಜದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದು, ನಮ್ಮ ಕುಲಕಸುಬು ಶ್ರಮದಿಂದಲೇ ಮುಂದೆ ಬರಲು ಸಾಧ್ಯ, ಸಮುದಾಯದ ಪ್ರತಿಯೊಬ್ಬರೂ ವೃತ್ತಿಪರರರಾಗಿ ಪರಿಣಿತಿ ಹೊಂದಬೇಕು. ಇದರಿಂದ ಮಾತ್ರ ಸಣ್ಣ ಸಮುದಾಯವು ಎಲ್ಲಾ ಕ್ಷೇತ್ರದಲ್ಲೂ ಏಳಿಗೆ ಹೊಂದುವುದು ಎಂದು ಮಾಜಿ ಶಾಸಕರು ಹಾಗೂ ಕೊರಮ ಸಮುದಾಯದ ಗೌರವಾಧ್ಯಕ್ಷ ಜಿ .ಚಂದ್ರಣ್ಣ ಹೇಳಿದರು.
ದೇವನಹಳ್ಳಿ ಟೌನ್ ನ ತಾಲೂಕು ಆಡಳಿತ, ಕೊರಮಸಮುದಾಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಶ್ರೀ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಆಚರಣೆಯನ್ನು ತಾಲೂಕು ಆಡಳಿತ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.
ದೇವನಹಳ್ಳಿ ತಾಲೂಕು ತಹಸೀಲ್ದಾರ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಶಿವರಾಜ್ ಅವರು ಶ್ರೀ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಎ.ಕೆ.ಪಿನಾಗೇಶ್ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿಮಂತ್ರಿಯಾಗಿದ್ದ ಶರಣ ನೂಲಿಯ ಚನ್ನಯ್ಯ ಅವರು, ಎಲ್ಲಾ ಸಮುದಾಯಕ್ಕೆ ಸ್ಫೂರ್ತಿದಾಯಕರಾಗಿದ್ದಾರೆ. ದೇವನಹಳ್ಳಿ ತಾಲೂಕಿನಾದ್ಯಂತ ಸುಮಾರು 8-10 ಸಾವಿರ ಸಮಾಜದವರಿದ್ದು, ರಾಜ್ಯದಲ್ಲಿ ಸುಮಾರು I5- 20ಲಕ್ಷ ಜನಸಂಖ್ಯೆ ಹಾಗೂ ದೇಶದಾದ್ಯಂತ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮಾಜವಾಗಿದೆ. ರಾಜ್ಯದಲ್ಲಿ ಕೊರಮ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂಬರುವಂತೆ ಎಲ್ಲಾ ರೀತಿಯಲ್ಲಿ ಸಂಘಟಿತರಾಗಬೇಕು ಎಂದರು.
ಈ ವೇಳೆ ತಹಶಿಲ್ದಾರ್ ಶಿವರಾಜ್ ರವರನ್ನು ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಜಿ.ಚನ್ನಕೇಶವ, ಅಧ್ಯಕ್ಷ ಕೆ.ನಾಗೇಶ್, ಪ್ರಧಾನ ಕಾರ್ಯದರ್ಶಿ ಆರ್.ಭರತ್ ಕುಮಾರ್, ಖಜಾಂಚಿ ಆರ್.ಶಂಕರ್, ಕಾರ್ಯದರ್ಶಿ ವಕೀಲ ಶ್ರೀನಿವಾಸ್, ಸಂ.ರಾ. ನವೀನ್ ಕುಮಾರ್, ಜಿ.ಗಣೇಶ್ ಬಾಬು, ನಿರ್ದೇಶಕರಾದ ಪ್ರಭಾಕರ್, ಅನಂತ್, ಶಂಕರ್, ಮಲ್ಲಿಕಾರ್ಜುನ್, ಲೋಕೇಶ್, ಚಂದ್ರಪ್ಪ, ಶಿವಕುಮಾರ್, ಶ್ರೀಧರ್, ಉದಯರವಿ, ಸಂದೀಪ್ ಸೇರಿದಂತೆ ತಾ.ಆಡಳಿತ ಸಿಬ್ಬಂದಿಗಳು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದರು.