ಸುದ್ದಿಮೂಲ ವಾರ್ತೆ ರಾಯಚೂರು, ಜ.11:
ಮಹಿಳೆಯರು ದಲಿತರು ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲರೂ ಕೂಡಿ ಸೌಹಾರ್ದ ಭಾರತ ಕಟ್ಟಲೇಬೇಕಾಗಿದೆ ಎಂದು ಹಿರಿಯ ಸಾಹಿತಿ ವೀರ ಹನುಮಾನ ಹೇಳಿದರು.
ಶನಿವಾರ ಸಂಜೆ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮ್ಯಾಾದಾರ ಲಲಿತಕಲಾ ಪ್ರತಿಷ್ಠಾಾನ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡ ನಾಡಿನ ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ, ಸಮಾನತೆಯ ಸ್ನೇಹಿತ ಪುಸ್ತಕ ಜನಾರ್ಪಣೆ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು. ಭಾರತದಲ್ಲಿನ ಸಾಮಾಜಿಕ ನ್ಯಾಾಯದ ಅನೇಕ ಮುಖಗಳನ್ನು ಕಾಣಬಹುದು.ಹತ್ತು ಲೇಖನಗಳಲ್ಲಿ ಭಾರತ ಪಾರಂಪರಿಕ ಸೌಹಾರ್ದತೆ ಜೊತೆಗೆ ದೇಶದ ಬಿಕ್ಕಟ್ಟುಗಳಿಗೆ ಪರಿಹಾರ ಕಾಣಬಹುದಾಗಿದೆ ಎಂದು ಹೇಳಿದರು.
ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿ. ಬಿ. ಚಿಲ್ಕರಾಗಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ಮಾರುಕಟ್ಟೆೆ ಮಾತುಗಳಿಗಿಂತ ಮೌಲ್ಯ ಮಾತುಗಳು ಉತ್ತಮ ಎಂದು ಹೇಳಿದರು.
ಹಿರಿಯ ಸಾಹಿತಿ ಮಹಾಂತೇಶ ಮಸ್ಕಿಿ ಕೃತಿ ಪರಿಚಯಿಸಿ ಈ ರಾಷ್ಟ್ರವನ್ನು ಒಂದೇ ಧರ್ಮಕ್ಕೆೆ ಸೀಮಿತಗೊಳಿಸಬಾರದು ಅನ್ನುವ ಉದ್ದೇಶದಿಂದ ಈ ಪುಸ್ತಕದಲ್ಲಿರುವ ತಿರುಳಾಗಿದೆ. ಜಗತ್ತು ಬಹಳ ಸುಂದರವಾಗಿದೆ ಅದಕ್ಕೆೆ ಅಂಟಿರುವ ರೋಗ ಮನುಷ್ಯ, ಪ್ರಸ್ತುತ ಸಮಾಜಕ್ಕೆೆ ಈ ಕೃತಿ ಔಷಧಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಾಂಶುಪಾಲ ಡಾ.ಕೆ.ಖಾದರ ಬಾಷಾ, ಹಿರಿಯ ಸಾಹಿತಿ ಬಾಬು ಬಂಡಾರಿಗಲ್, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿದರು.
ವೇದಿಕೆಯಲ್ಲಿ ಪರಿಷತ್ತಿಿನ ನಿಕಟ ಪೂರ್ವ ಜಿಲ್ಲಾಾಧ್ಯಕ್ಷ ಡಾ. ಬಸವ ಪ್ರಭು ಪಾಟೀಲ್ ಬೆಟ್ಟದೂರು, ಮ್ಯಾಾದಾರ ಲಲಿತಕಲಾ ಪ್ರತಿಷ್ಠಾಾನದ ಅಧ್ಯಕ್ಷ ಎಚ್.ಎಚ್.ಮ್ಯಾಾದಾರ, ಪರಿಷತ್ ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಉಪಸ್ಥಿಿತರಿದ್ದರು.
ಎಲ್ಲರೂ ಸೇರಿಕೊಂಡು ಸೌಹಾರ್ದ ಭಾರತ ಕಟ್ಟಲೇಬೇಕು – ವೀರಹನುಮಾನ

