ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ನ.9:ಕರ್ನಾಟಕದಲ್ಲಿ ಸವಲತ್ತುಗಳನ್ನು ಬಳಸಿಕೊಳ್ಳುತ್ತಿರುವ ಪ್ರತಿಯೊಬ್ಬರೂ ಕನ್ನಡದ ಋಣ ತೀರಿಸಬೇಕು ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಕೆ.ಆರ್.ಪುರ ಸಮೀಪದ ಬಾಬುಸಾಪಾಳ್ಯದಲ್ಲಿ ನಡೆದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶ ವಿದೇಶದ ಭಾಗಗಳಿಂದ ಬರುವ ಯಾವೊಬ್ಬ ಪ್ರಜೆಯು ಕರ್ನಾಟಕದಲ್ಲಿ ರಾಜಾರೋಷವಾಗಿ ವಾಸಿಸುವ ಒಂದು ಉತ್ತಮ ವ್ಯವಸ್ಥೆ ಇದೆ, ಹೊರಭಾಗಗಳಿಂದ ಬರುವ ಜನರು ಇಲ್ಲಿನ ಸ್ಥಳೀಯ ಭಾಷೆಗೆ ಒತ್ತು ನೀಡಿ ಇಲ್ಲಿನ ಭಾಷೆ ಕಲಿತು ಮಾತನಾಡಬೇಕು ಎಂದು ಕಿವಿ ಮಾತು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಅಟೋಗಳಿಗೆ ಸಿಂಗರಿಸಲಾಗಿತ್ತು. ಕನ್ನಡ ನಾಡಿನ ಸಾಧಕರ ಭಾವಚಿತ್ರ ಹೊತ್ತ ಮೆರವಣಿಗೆ ಆಟೋಗಳನ್ನು ಬಾಬುಸಪಾಳ್ಯ, ಹೊರಮಾವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಗಣೇಶ್, ಮಂಜುನಾಥ್, ಮುನಿರಾಜು, ಮುನಿಸ್ವಾಮಿ, ಜೋಸೆಫ್ ರಾಜ್, ಕೇಶವ, ಕೃಷ್ಣ ಇದ್ದರು.