ಸುದ್ದಿಮೂಲ ವಾರ್ತೆ ಮಾನ್ವಿ, ೆ.23:
ಭಾರತೀಯ ಸೇನೆಗೆ ಸೇರಲು ಆಸಕ್ತಿಿಯಿರುವ ಜಿಲ್ಲೆಯ ಯುವಕರು ಏಪ್ರಿಿಲ್ 1 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಚೆನ್ನಾಾರೆಡ್ಡಿಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ 25 ಸಾವಿರಕ್ಕೂ ಕ್ಕೂ ಹೆಚ್ಚು ಅಗ್ನಿಿವೀರ ಹುದ್ದೆಗಳ ನೇಮಕಾತಿ ನಡೆಯುತ್ತಿಿದ್ದು ಸೇನೆಯ ಅಧಿಕೃತ ವೆಬ್ಸೈಟ್ ಡಿಡಿಡಿ.್ಜಟಜ್ಞಿಿಜ್ಞಿಿಜ್ಞ್ಟಿಞ.್ಞಜ್ಚಿಿ.ಇನ್ ಗೆ ಭೇಟಿ ನೀಡಿ ಅಲ್ಲಿ ಅಗ್ನಿಿಪಥ್ ಟ್ಯಾಾಬ್ ಕ್ಲಿಿಕ್ ಮಾಡಿ, ನಿಮ್ಮ ಆಧಾರ್ ಅಥವಾ 10 ನೇ ತರಗತಿ ಸರ್ಟಿಫಿಕೇಟ್ ಬಳಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಶುಲ್ಕ 250 ರೂ. ಇದ್ದು, ಈ ಬಾರಿಯ ನೇಮಕಾತಿಯಲ್ಲಿ 8 ನೇ ತರಗತಿಯಿಂದ ಪಿಯುಸಿ ವರೆಗಿನ ನಾಲ್ಕು ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆೆ ಮಾಡಿಕೊಳ್ಳಲಾಗುತ್ತಿಿದೆ. ಅಗ್ನಿಿವೀರ್ ಜನರಲ್ ಡ್ಯೂಟಿ ಹುದ್ದೆಗೆ 10 ನೇ ತರಗತಿಯಲ್ಲಿ ಕನಿಷ್ಠ ಶೇ.45 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಗ್ನಿಿ ವೀರ್ ಟೆಕ್ನಿಿಕಲ್ ಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣ ಅಥವಾ 10 ನೇ ತರಗತಿಯ ಜೊತೆಗೆ ಐಟಿಐ ಮುಗಿಸಿರಬೇಕು. ಅಗ್ನಿಿವೀರ್ ಕ್ಲರ್ಕ್ ಹಾಗೂ ಸ್ಟೋೋರ್ ಕೀಪರ್ ಹುದ್ದೆಗಳಿಗೆ ಯಾವುದೇ ವಿಭಾಗದ ಪಿಯುಸಿಯಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು. ಇಂಗ್ಲಿಿಷ್ ಮತ್ತು ಗಣಿತ ವಿಷಯ ಕಡ್ಡಾಾಯವಾಗಿರುತ್ತದೆ. ಅಗ್ನಿಿವೀರ್ ಟ್ರೇಡ್ಸ್ಮನ್ ಹುದ್ದೆಗೆ 8 ನೇ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು. ಎರಡು ಹಂತಗಳಲ್ಲಿ ಸಾಮರ್ಥ್ಯದ ಪರೀಕ್ಷೆ ನಡೆಯಲ್ಲಿದ್ದು ಮೊದಲಿಗೆ ಕಂಪ್ಯೂೂಟರ್ ಆಧಾರಿತ ಲಿಖಿತ ಪರೀಕ್ಷೆ ಇರುತ್ತದೆ.
ಇದರಲ್ಲಿ ಉತ್ತೀರ್ಣರಾದವರಿಗೆ ಮುಂದಿನ ಹಂತಕ್ಕೆೆ ಅವಕಾಶವಿರುತ್ತದೆ. ಎರಡನೇ ಹಂತದಲ್ಲಿ ನೇಮಕಾತಿ ರ್ಯಾಾಲಿಯಲ್ಲಿ ದೈಹಿಕ ಪರೀಕ್ಷೆ ಇರುತ್ತದೆ. ಕ್ಲರ್ಕ್ ಹುದ್ದೆಗೆ ಟೈಪಿಂಗ್ ಟೆಸ್ಟ್ ಇರುತ್ತದೆ. ಭಾರತ ಸೇನೆಯಲ್ಲಿ ಆಯ್ಕೆೆಯಾದ ಅಗ್ನಿಿ ವೀರರಿಗೆ ಆಕರ್ಷಕ ವೇತನ ಮತ್ತು ಸವಲತ್ತುಗಳು, ಸೇವಾ ನಿಧಿ ಪ್ಯಾಾಕೇಜ್ ಲಭ್ಯವಿರುತ್ತದೆ. ಹೆಚ್ಚಿಿನ ಮಾಹಿತಿಗಾಗಿ ಮೊ.ಸಂಖ್ಯೆೆ 9591208111ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಮಾಜಿ ಸೈನಿಕ ಚೆನ್ನಾಾರೆಡ್ಡಿಿ ತಿಳಿಸಿದ್ದಾರೆ.
ಅಗ್ನಿವೀರ ಹುದ್ದೆಗಳಿಗೆ ಯುವಕರು ಅರ್ಜಿ ಸಲ್ಲಿಸಲು ಮಾಜಿ ಸೈನಿಕ ಚೆನ್ನಾರೆಡ್ಡಿ ಮನವಿ

