ಸುದ್ದಿಮೂಲ ವಾರ್ತೆ ದೇವದುರ್ಗ, ಜ.21:
ಗ್ರಾಾಮೀಣ ಭಾಗದ ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ದೇವದುರ್ಗದ ಪ್ರತಿಷ್ಠಿಿತ ಎವಿಎನ್ ಪಿಯು ಕಾಲೇಜು ಮತ್ತು ಎಕ್ಸೆೆಲ್ ನೀಟ್ ಅಕಾಡೆಮಿ ಈ ವರ್ಷ ಬೃಹತ್ ವಿದ್ಯಾಾರ್ಥಿ ವೇತನ ಪರೀಕ್ಷೆ ಆಯೋಜಿಸಿದೆ ಎಂದು ಲಕ್ಷ್ಮೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆೆಯ ಪ್ರಾಾರ್ಚಾರ್ಯ ಆದಿಶೇಖರ್ರೆಡ್ಡಿಿ, ಆಡಳಿತಾಧಿಕಾರಿ ಗೋಪಾಲಕೃಷ್ಣ ವಿ.ಮೇಟಿ ತಿಳಿಸಿದರು.
ಈ ಪರೀಕ್ಷೆಯ ಮೂಲಕ ಆಯ್ಕೆೆಯಾದ ಅರ್ಹ 7 ವಿದ್ಯಾಾರ್ಥಿಗಳಿಗೆ ಕಾಲೇಜು ಮತ್ತು ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುವುದು. ಆಯ್ಕೆೆಯ ಟಾಪ್ 40 ವಿದ್ಯಾಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ರಿಯಾಯತಿ ನೀಡಲಾಗುವುದು.
ನಾವು ನಡೆಸುವಂತ ಪರೀಕ್ಷೆಯಲ್ಲಿ 100ಕ್ಕೆೆ 90 ಅಂಕಗಳನ್ನು ಪಡೆದ ಟಾಪ್ 7 ವಿದ್ಯಾಾರ್ಥಿಗಳಿಗೆ ಲ್ಯಾಾಪ್ಟಾಾಪ್ ಮತ್ತು ಟ್ರಾಾವೆಲಿಂಗ್ ಬ್ಯಾಾಗ್ ಹಾಗೂ ಸ್ಕೂಲ್ ಬ್ಯಾಾಗ್ ಬಹುಮಾನವಾಗಿ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 2025-26 ಸಾಲಿನ 10ನೇ ತರಗತಿ ವ್ಯಾಾಸಂಗ ಮಾಡುತ್ತಿಿರುವ ವಿದ್ಯಾಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲು ಅರ್ಹರು ಎಂದು ತಿಳಿಸಿದರು.
ಗ್ರಾಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾಾರ್ಥಿಗಳು ಹಣಕಾಸಿನ ತೊಂದರೆಯಿಂದ ವಿಜ್ಞಾನ ವಿಭಾಗ ಆಯ್ಕೆೆ ಮಾಡಲು ವಂಚಿತರಾಗಬಾರದು ಎಂಬುದು ಸಂಸ್ಥೆೆಯ ಗುರಿ ಪರೀಕ್ಷೆಯ ಉದ್ದೇಶವಾಗಿದೆ. ವಿದ್ಯಾಾರ್ಥಿ ವೇತನವು ಕೇವಲ ಬೋಧನಾ ಶುಲ್ಕಕ್ಕೆೆ ಮಾತ್ರವಲ್ಲದೆ, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಉಚಿತ ವಸತಿ ಮತ್ತು ತರಬೇತಿಯಲ್ಲಿ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಒಟ್ಟು 7ಲ.ರೂ, ವಿದ್ಯಾಾರ್ಥಿ ವೇತನ ನೀಡಲಾಗುವುದೆಂದು ಘೋಷಿಸಿದರು.
ಐಐಟಿ, ಐಐಐಟಿ, ಜೆಇಇ, ನೀಟ್, ಎನ್ಇಇಟಿ, ಮತ್ತು ಸಿಇಟಿ, ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಅದಕ್ಕೆೆ ಬೇಕಾದ ಭದ್ರ ಬುನಾದಿಯನ್ನು ಈ ವಿದ್ಯಾಾರ್ಥಿ ವೇತನ ಪರೀಕ್ಷೆಯು ಒದಗಿಸಲಾಗಿದ್ದು, ಜ.25ರಂದು 10.30ರಿಂದ 12.30ವರೆಗೆ ನೋಂದಣಿ ಪ್ರಕ್ರಿಿಯೆ ನಡೆಯಲಿದ್ದು, ಹೆಚ್ಚಿಿನ ಮಾಹಿತಿಗೆ 8142383315, 9949909254 ದೂರವಾಣಿ ನಂಬರಿಗೆ ಸಂಪರ್ಕಿಸಬೇಕೆಂದು ಸಂಸ್ಥೆೆಯ ಪ್ರಾಾರ್ಚಾಯರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದರು.
ಎಕ್ಸೆಲ್ ಟ್ಯಾಲೆಂಟ್ 2026 : ವಿದ್ಯಾರ್ಥಿಗಳಿಗೆ ಲಕ್ಷ್ಮಿ ವೆಂಕಟೇಶ್ವರ ಶಿಕ್ಷೆಣ ಸಂಸ್ಥೆಯಿಂದ ಪರೀಕ್ಷೆ ಆಯೋಜನೆ

