ಸುದ್ದಿಮೂಲ ವಾರ್ತೆ ಸಿಂಧನೂರು, ಜ.18:
ಕ-ಕ ಭಾಗದ ವಿದ್ಯಾಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ಅಗತ್ಯವಿದೆ. ಈ ನಿಟ್ಟಿಿನಲ್ಲಿ ಎಕ್ಸಲೆಂಟ್ ಕಾಲೇಜು ಪ್ರತಿ ವರ್ಷ ಹತ್ತನೇ ತರಗತಿ ವಿದ್ಯಾಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಮ್ಮಿಿಕೊಳ್ಳುತ್ತಿಿರುವದು ಶ್ಲಾಾಘನೀಯವಾಗಿದೆ ಎಂದು ಪ್ರೌೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಾ ಉಪಾಧ್ಯಕ್ಷ ರಾಮದಾಸ ಹೇಳಿದರು.
ನಗರದ ಎಕ್ಸಲೆಂಟ್ ಕಾಲೇಜಿನಲ್ಲಿ ರವಿವಾರ ಎಕ್ಸಲೆಂಟ್ ್ಯೂಚರ್ ಅಚಿವರ್ಸ್ ಟೆಸ್ಟ್ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಭಾಗದ ವಿದ್ಯಾಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಸ್ಪರ್ಧಾ ಮನೋಭಾವದ ಕೊರತೆ ಕಾಣುತ್ತಿಿದ್ದೇವೆ. ವಿವಿಧ ಸರಕಾರಿ ನೇಮಕಾತಿಗಳಲ್ಲಿ ಬೇರೆ ಭಾಗಕ್ಕೆೆ ಹೋಲಿಗೆ ಮಾಡಿಕೊಂಡರೆ ನಮ್ಮ ಭಾಗದ ಅಭ್ಯರ್ಥಿಗಳು ಆಯ್ಕೆೆಯಾಗುವದು ಕಡಿಮೆ. ಹತ್ತನೇ ತರಗತಿ ಓದುತ್ತಿಿರುವಾಗಲೇ ಗುರಿಯನ್ನು ಹೊಂದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಅಂದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆೆ ಕಾರ್ಯದರ್ಶಿ ವೆಂಕಟರಾವ ಮಿರಿಯಮ್ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಸ್ಪರ್ಧಾಮನೋಭಾವ ಬೆಳೆಸುವ ನಿಟ್ಟಿಿನಲ್ಲಿ ನಮ್ಮ ಸಂಸ್ಥೆೆಯಿಂದ ಪ್ರತಿ ವರ್ಷ ಟ್ಯಾಾಲೆಂಟ್ ಪರೀಕ್ಷೆಗಳನ್ನು ನಡೆಸಿ, ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿಿದೆ. ಪರೀಕ್ಷೆಗಳನ್ನು ನಡೆಸಲು ತಾಲೂಕಿನ ವಿವಿಧ ಸಂಪನ್ಮೂಲ ವ್ಯಕ್ತಿಿಗಳನ್ನು, ವಿಷಯ ಪರಿಣತರೊಂದಿಗೆ ಹಲವಾರು ಸಭೆಗಳನ್ನು ಮಾಡಿ ಹತ್ತನೇ ತರಗತಿ ಲಿತಾಂಶ ಸುಧಾರಿಸುವ ನಿಟ್ಟಿಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿಿದೆ ಎಂದರು.
ಪ್ರೌೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ರವೀಂದ್ರಗೌಡ, ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಚನ್ನಬಸವ ವಳಬಳ್ಳಾಾರಿ, ಪ್ರೌೌಢಶಾಲಾ ಸಹ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ವೀರನಗೌಡ, ಮಾಡಿಸಿರವಾರ ಸರ್ಕಾರಿ ಪ್ರೌೌಢಶಾಲೆ ಮುಖ್ಯಗುರು ವೆಂಕಟೇಶ್ ಕುಲಕರ್ಣಿ, ಮುಖ್ಯಗುರು ಕನಕಪ್ಪ, ಹಂಚಿನಾಳಕ್ಯಾಾಂಪಿನ ಸಹಶಿಕ್ಷಕ ಬಸವರಾಜ, ದೈಹಿಕ ಶಿಕ್ಷಣ ಶಿಕ್ಷಕ ವೀರೇಶ, ಪತ್ರಕರ್ತ ಅಂಬಣ್ಣ ಸಾಸಲಮರಿ, ಎಕ್ಸಲೆಂಟ್ ಕಾಲೇಜಿನ ಪ್ರಾಾಚಾರ್ಯ ಮಂಜುನಾಥ ಸೋಮಲಾಪುರ, ಉಪನ್ಯಾಾಸಕ ಹೆಚ್.ಡಿ.ಹಳ್ಳೂರು ವೇದಿಕೆಯಲ್ಲಿದ್ದರು. ನಾಗರಾಜ ಮುಕ್ಕುಂದಾ ಪ್ರಸ್ತಾಾವಿಕವಾಗಿ ಮಾತನಾಡಿದರು. ತಿಮ್ಮಣ್ಣ ಕಲ್ಮಂಗಿ ನಿರೂಪಿಸಿದರು.
ಎಕ್ಸಲೆಂಟ್ ್ಯೂಚರ್ ಅಚಿವರ್ಸ್ ಟೆಸ್ಟ್ ಮಕ್ಕಳಲ್ಲಿ ಸ್ಪರ್ಧಾಮನೋಭಾವ ಬೆಳೆಸಲು ಸಹಕಾರಿ ರಾಮದಾಸ

