ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.13: ಕೊಪ್ಪಳದ ಅಬಕಾರಿ ಇಲಾಖೆಯ ಉಪ ಆಯುಕ್ತೆ ಶ್ರೀಮತಿ ಸೆಲಿನಾ ಈ ಹಿಂದೆ ಲಂಚ ಸ್ವೀಕರಿಸುವಾ ಸಿಕ್ಕಿ ಬಿದ್ದಿದ್ದು. ಈಗ ಇದೇ ದ್ವೇಷಕ್ಕಾಗಿ ನನ್ನ ಗಂಗಾವತಿಯಲ್ಲಿಯ ಆದಿಶಕ್ತಿ ದುರ್ಗಾ ಇಂಟರ್ನ್ಯಾಷನಲ್ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ ಈ ಪ್ರಕರಣದಲ್ಲಿ ದ್ವೇಷ ಸಾಧಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೊಟೆಲ್ ಮಾಲೀಕರಾದ ಶ್ರೀಮತಿ ಶೈಲಾಜ ಪ್ರಭಾಕರಗೌಡ ಆಗ್ರಹಿಸಿದ್ದಾರೆ.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ 2022 ರ ಮೇ 14 ರಂದು ಎಸಿಬಿ ಟ್ರಾಪ್ ಆಗಿ ಇನ್ನೂ ವಿಚಾರಣೆ ಹಂತದಲ್ಲಿದೆ. ಆದರೆ ಅವರು ಕೆಎಟಿ ಮೂಲಕ ತಮ್ಮ ಅಮಾನತ್ತಿಗೆ ಸ್ಟೇ ತಂದಿದ್ದಾರೆ.
ಈ ಮಧ್ಯೆ ಚುನಾವಣೆಯ ಸಂದರ್ಭದಲ್ಲಿ 2023 ರ ಮೇ 8 ರಂದು ಹೊಟೆಲ್ ಮೇಲೆ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ. ಇದೇ ಹೊಟೆಲ್ ನಲ್ಲಿ ಕೆಲವರಿಂದ ಗಲಾಟೆ ಮಾಡಿಸಿ ಅಲ್ಲಿಯ ಮದ್ಯದ ದಾಸ್ತಾನು, ಬಿಯರ್ ಇತರ ವಸ್ತುಗಳೊಂದಿಗೆ ಬಾರ್ ಸೀಜ್ ಮಾಡಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಆಗಿರುವ ಪ್ರಕರಣಗಳನ್ನು ಗಂಭೀರ ಸ್ವರೂಪದಲ್ಲ ಎನ್ನುವ ಕಾರಣಕ್ಕೆ ಕಂದಾಯ ಇಲಾಖೆಯ ವರ್ಗಾಯಿಸಬೇಕು. ದ್ವೇಷಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿರುವ ಶ್ರೀಮತಿ ಸೆಲಿನಾರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.
ಶ್ರೀಮತಿ ಸೆಲಿನಾ ಲಂಚ ಕೇಳಿರುವ ಆಡಿಯೋ ಇದೆ. ಅಲ್ಲದೆ ಗಲಾಟೆ ಮಾಡಿಸಲು ಇರುವ ಆಡಿಯೋ ಇದೆ. ನಮ್ಮ ಬಾರ್ ನಿಂದಲೇ ಕೋಮು ಗಲಭೆ ಮಾಡಿಸಲು ಕಾರಣವಾಗಿದೆ ಎಂಬ ವರದಿ ಬಂದಿದೆ.
ಬಾರ್ ಬಂದ್ ಮಾಡಿಸಿರುವದನ್ನು ನೆಪ ತತ್ವ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದಿರುವ ಆಡಿಯೋ ಇದೆ ಎಂದು ತಿಳಿಸಿದರು. ಇಲ್ಲವೇ ಆಕೆಯನ್ನು ವರ್ಗಾವಣೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗು ಶಾಸಕ ರಾಘವೇಂದ್ರ ಹಿಟ್ನಾಳರು ಆಕೆಯನ್ನು ವರ್ಗಾವಣೆ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.ಡಾ ಪ್ರಭಾಕರಗೌಡ ಇದ್ದರು.