ಸುದ್ದಿಮೂಲ ವಾರ್ತೆ ಕೊಪ್ಪಳ, ನ.12:
ಇಂದು ಕುಷ್ಟಗಿ ತಾಲೂಕಿನ ನಡವಲಕೊಪ್ಪ ಬಳಿಯಲ್ಲಿ ಬೈಕ್ ನಲ್ಲಿ ಗಾಂಜಾ ಸಾಗಿಸುತ್ತಿಿದ್ದಾಾಗ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶ ಪಡಿಸಿಕೊಂಡಿದ್ದಾಾರೆ.ಈ ಮಧ್ಯೆೆ ಆರೋಪಿ ಪರಾರಿಯಾಗಿದ್ದಾಾನೆ.
ಹಿರಿಯ ಅಧಿಕಾರಿಗಳ ಸೂಚನೆಯ ಹಿನ್ನೆೆಲೆಯಲ್ಲಿ ಕುಷ್ಟಗಿ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಕುಷ್ಟಗಿ ತಾಲೂಕಿನ ನಡುವಲಕೊಪ್ಪ ಗ್ರಾಾಮ ರಾಷ್ಟ್ರೀಯ ಹೆದ್ದಾಾರಿ ಸಂಖ್ಯೆೆ 50 ರ ಪಕ್ಕದ ಸರ್ವೇ ನಂಬರ್ 12/4 ರ ಟಿನ್ ಶೆಡ್ ಅಂಗಡಿ ಮುಂದೆ ಅಬಕಾರಿ ದಾಳಿ ಮಾಡಿ 5 ಕೆ ಜಿ ಸಂಸ್ಕರಿಸಿದ ಒಣ ಗಾಂಜಾ ಮತ್ತು ಒಂದು ದ್ವಿಿಚಕ್ರ ವಾಹನ ಜಪ್ತಿಿ ಪಡಿಸಲಾಗಿದೆ. ಆರೋಪಿ ಕಡೇಕೊಪ್ಪದ ರಣಜಿತ್ ಸಿಂಗ್ ಎಂದು ಗುರುತಿಸಲಾಗಿದೆ.
ದಾಳಿಯಲ್ಲಿ ಆಂಜನೇಯ, ಅಬಕಾರಿ ನಿರೀಕ್ಷಕ ರವಿಕುಮಾರ್ ಪಾಟೀಲ್ ಮತ್ತು ಅಣ್ಣಪ್ಪ ಕಡೆಮನಿ ಹಾಗೂ ಉಪ ನಿರೀಕ್ಷಕ ನೀಲಮ್ಮ ಗಲಗಲಿ ಹಾಗೂ ಸಿಬ್ಬಂದಿಗಳಾದ ಹುಸೇನ್ ಭಾಷಾ, ಹನುಮಂತಪ್ಪ ಕುರಿ,ರಾಮಾ ಆಂಜನೇಯ ವಾಹನ ಚಾಲಕ ಗುಂಡಪ್ಪ ಭಾಗಿಯಾಗಿದ್ದರು. ರಣಜಿತ್ ಸಿಂಗ್ ತಂದೆ ಅರವಿಂದ್ ಸಿಂಗ್ ಚವ್ಹಾಾಣ ಮತ್ತು ಪ್ರಕರಣದಲ್ಲಿ ಭಾಗಿಯಾದ ಇನ್ನಿಿತರ 3 ಜನರ ವಿರುದ್ಧ ಅಧಿಕಾರಿ ಬಸವರಾಜ ಕಾಕರಗಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾಾರೆ.
ಅಬಕಾರಿ ದಾಳಿ ; 3 ಲಕ್ಷ ರೂಪಾಯಿ ಗಾಂಜಾ ವಶ

