ಸುದ್ದಿಮೂಲ ವಾರ್ತೆ ಬೆಂಗಳೂರು, ೆ.03:
ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ದೂರು ನೀಡುವ ನೆಪದಲ್ಲಿ ಆಡಳಿತ ಪಕ್ಷದ ಸದಸ್ಯರನ್ನು ಪ್ರಚೋದಿಸಿದ್ದಾರೆ. ಹೀಗಾಗಿ ಇದು ತಪ್ಪುು ನಡೆ ಇದಕ್ಕಾಾಗಿ ಅವರು ಸದನದ ಕ್ಷಮೆ ಕೋರಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ವಿಧಾನ ಪರಿಷತ್ ಕಲಾಪದಲ್ಲಿ ಅವರು ಪಾಲ್ಗೊೊಂಡು ಮಾತನಾಡಿದರು. ರವಿ ಅವರು ದೂರು ನೀಡುತ್ತಿಿದ್ದೇನೆ ಎಂದರೂ ಅವರ ಹೇಳಿಕೆಯಲ್ಲಿ ಪ್ರಚೋದನೆ ಇದು. ಇದು ಕೂಡ ಅಪಾಯಕಾರಿ ಹೀಗಾಗಿ ಅವರು ತಮ್ಮ ಮಾತನ್ನು ಸಮರ್ಥಿಸಿಕೊಳ್ಳದೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಸದನದಲ್ಲಿ ಯಾರು ದೊಡ್ಡವರಲ್ಲ. ಸದನವೇ ದೊಡ್ಡದು. ಇಲ್ಲಿ ನಾನು ದೊಡ್ಡವ ನೀನು ಚಿಕ್ಕವ ಎಂಬ ಭಾವನೆ ಬೇಡ. ಹೀಗಾಗಿ ಸಿ.ಟಿ. ರವಿ ಅವರು ಈ ವಿಚಾರವನ್ನು ವಿಶಾಲಕೋನದಲ್ಲಿ ಸ್ವೀಕರಿಸಿ ಕ್ಷಮೆ ಕೋರಿದರೆ ಉತ್ತಮ. ಅವರು ಸದನಕ್ಕೆೆ ತಲೆ ಬಾಗಿದರೆ ಕಲಾಪ ಸುಗಮವಾಗಿ ನಡೆಯುತ್ತದೆ ಎಂದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಸಲಹೆಯನ್ನು ಆಡಳಿತ ಪಕ್ಷದ ಸದಸ್ಯರು ಬೆಂಬಲಿಸಿದರು.
ಸಿಟಿ ರವಿಯಿಂದ ಪ್ರಚೋದನೆ: ಸಚಿವ ಎಚ್.ಕೆ.ಪಾಟೀಲ್

