ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.08:
ಜಿಲ್ಲೆಯಲ್ಲಿನ 8 ನಗರ ಸ್ಥಳೀಯ ಸಂಸ್ಥೆೆಗಳ ವ್ಯಾಾಪ್ತಿಿಯಲ್ಲಿ ವಿವಿಧ ಯೋಜನೆಗಳಿಗೆ ಕೈಗೊಂಡಿರುವ ಅಭಿವೃದ್ಧಿಿ ಕಾಮಗಾರಿಗಳನ್ನು ತ್ವರಿತವಾಗಿ ಪೂ ರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಿಕೇರಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನಗರ ಸ್ಥಳೀಯ ಸಂಸ್ಥೆೆಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಿಸಲು ಸರ್ಕಾರದ ವಿವಿಧ ಯೋಜನೆಗಳಡಿ ಕೈಗೊಂಡಿರುವ ರಸ್ತೆೆ, ಚರಂಡಿ, ವಿದ್ಯುತ್ ದೀಪ, ತ್ಯಾಾಜ್ಯ ವಿಲೇವಾರಿ ಹಾಗೂ ಇತರೆ ಅಭಿವೃದ್ಧಿಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸ್ಥಳೀಯ ಸಂಸ್ಥೆೆಗಳಲ್ಲಿ ಬಾಕಿ ಉಳಿದ ಅನುದಾನವನ್ನು ಮೂಲ ಭೂತ ಸೌಲಭ್ಯ ಮತ್ತು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಿಯಾ ಯೋಜನೆ ಸಿದ್ದಪಡಿಸಿಕೊಳ್ಳಬೇಕು. ಸರ್ಕಾರದಿಂದ ಅಂಗವಿಕಲರಿಗೆ ಸಹಾಯಧನ ಮತ್ತು ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಾರ್ಥಿಗಳಿಗೆ ಉಚಿತ ಕಂಪ್ಯೂೂಟರ್ ಸೇರಿದಂತೆ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಲಾ ನುಭವಿಗಳಿಗೆ ವಿತರಿಸಬೇಕು. ತ್ಯಾಾಜ್ಯ ವಿಲೇವಾರಿ ಘಟಕಕ್ಕೆೆ ಆದ್ಯತೆ ನೀಡಬೇಕು ಮತ್ತು ವೈಜ್ಞಾನಿಕ ತ್ಯಾಾಜ್ಯ ವಿಲೇವಾರಿ ಮಾಡಬೇಕು. ಸರ್ಕಾರವು ಬಡವರು ಮತ್ತು ಕಾರ್ಮಿಕರಿಗೆ ಅತಿ ಕಡಿಮೆ ಬೆಲೆಗೆ ಉಪಹಾರ ಮತ್ತು ಭೋಜನ ನೀಡುತ್ತಿಿದ್ದು ಕ್ಯಾಾಂಟಿನ್ಗಳಲ್ಲಿ ಸ್ವಚ್ಚತೆಗೆ ಹೆಚ್ಚಿಿನ ಆದ್ಯತೆ ನೀಡುವುದರ ಜತೆಗೆ ಉತ್ತಮ ಗುಣಮಟ್ಟದ ಉಪಾಹಾರ ಮತ್ತು ಆಹಾರವನ್ನು ಸರಿಯಾದ ಸಮಯಕ್ಕೆೆ ನೀಡಬೇಕು. ಸುಪ್ರೀೀಂ ಕೋರ್ಟ್ನ ಆದೇಶದಂತೆ ನಗರಪಾಲಿಕೆ ವ್ಯಾಾಪ್ತಿಿಯಲ್ಲಿರುವ ಶಾಲೆ-ಕಾಲೇಜು, ಆಸ್ಪತ್ರೆೆ, ಬಸ್ ನಿಲ್ದಾಾಣ, ಕ್ರೀೆಡಾ ಸಂಕೀರ್ಣ ಮೈದಾನಗಳಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಲ್ಲಿ ಇರಿಸುವಂತೆ ಕ್ರಮವಹಿಸಬೇಕು. ಸರ್ಕಾರದಿಂದ ಅರ್ಹ ಲಾನುಭವಿಗಳಿಗೆ ನಿರ್ಮಿಸಿಕೊಡುತ್ತಿಿರುವ ವಸತಿ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಅವರಿಗೆ ಹಸ್ತಾಾಂತರಿಸಬೇಕು ಎಂದು ಸೂಚಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿಿ ಕೋಶ ಯೋಜನಾ ನಿರ್ದೇಶಕರಾದ ಮ ನೋಹರ್ ಸೇರಿದಂತೆ ನಗರ ಸ್ಥಳಿಯ ಸಂಸ್ಥೆೆಗಳ ಅಧಿಕಾರಿಗಳು ಮತ್ತು ಅಭಿಯಂ ತರರು ಉಪಸ್ಥಿಿತರಿದ್ದರು.
‘ನಗರ ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸಿ’

