ಸುದ್ದಿಮೂಲ ವಾರ್ತೆ
ಮೈಸೂರು, ನ.15:ಮೈಸೂರು ಮಹಾನಗರ ಪಾಲಿಕೆ ಸದಸ್ಯರ ಅವಧಿ ಗುರುವಾರ ಮುಕ್ತಾಯವಾಗೊಳ್ಳಲಿದೆ. ಚುನಾವಣೆ ನಡೆಯುವವರೆಗೂ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಪಾಲಿಕೆ ಆಡಳಿತ ನಿರ್ವಹಣೆ ಮಾಡಲಿದ್ದಾರೆ.
ತಮ್ಮ ಅಧಿಕಾರವಧಿ ಮುಗಿಯುವ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ಸದಸ್ಯರಿಗೆ ಗುರುವಾರ ಸಂಜೆ 4 ಕ್ಕೆ ಮಹಾನಗರಪಾಲಿಕೆ ಆವರಣದಲ್ಲಿ ನಡೆಯಲಿರುವ ಫೋಟೋ ಸೆಷನ್ ನಡೆಯಲಿದ್ದು, ಬಳಿಕ ರಾತ್ರಿ 7 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜನೆ ಮಾಡಲಾಗಿದೆ.
ಇದೇ ವೇಳೆ ವಾರ್ಡ್ ನಂಬರ್ 22 ರ ಮಹಾನಗರ ಪಾಲಿಕೆ ಸದಸ್ಯೆ ನಮ್ರತಾ ರಮೇಶ್ ಅವರು, ಅಂತ್ಯಕ್ಕೆ ಒಂದು ದಿನ ಬಾಕಿಯಿರುವಾಗ ಪೌರಕಾರ್ಮಿಕರನ್ನು ಕರೆದು ಸನ್ಮಾನಿಸಿದರು. ಎಲ್ಲಾ ಪೌರ ಕಾರ್ಮಿಕರನ್ನು ತಮ್ಮ ಮನೆಯ ಬಳಿಗೆ ಕರೆದು ಶಾಲು ಹೊದಿಸಿ, ಹಾರ ಹಾಕಿ, ಸಿಹಿತಿಂಡಿಯ ಜೊತೆಗೆ ತಲಾ ಐದು ಸಾವಿರ ಗೌರವ ಧನ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಪಡುವಾರಹಳ್ಳಿಯ ಹಿರಿಯ ಮುಖಂಡರು ಹಾಗು ಪಾಲಿಕೆ ಸದಸ್ಯೆ ನಮ್ರತಾರವರ ಪತಿ ರಮೇಶ್ಇದ್ದರು.