ಸುದ್ದಿಮೂಲ ವಾರ್ತೆ
ಮೈಸೂರು, ಅ.11:ದಸರಾ ಪ್ರಮುಖ ಆಕರ್ಷಣೆ ಯಾದ ಗಜಪಡೆಗೆ ಬುಧವಾರ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು.
ವಸ್ತುಪ್ರದರ್ಶನ ಮೈದಾನದ ವಾಹನ ನಿಲುಗಡೆ ಜಾಗದಲ್ಲಿ 7 ಫಿರಂಗಿ ಗಾಡಿಗಳಿಂದ ಸಿಆರ್ ಸಿಬ್ಬಂದಿ ಕುಶಾಲತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21 ಕುಶಾಲತೋಪು ಸಿಡಿಸಿ ತಾಲೀಮು ನಡೆಸಿದರು.
ದಸರಾ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ಈ ಫಿರಂಗಿ ಸಿಡಿಸುವ ಕಾರ್ಯಕ್ರಮ ನಡೆಯಲಿದ್ದು, ಆನೆಗಳು, ಕುದುರೆಗಳು ಬೆದರದೆ ಸುಗಮವಾಗಿ ಸಾಗಲಿ, ಅವುಗಳಿಗೆ ಸಿಡಿಮದ್ದಿನ ಶಬ್ದ ಅಭ್ಯಾಸವಾಗಲಿ ಎಂಬ ದೃಷ್ಟಿಯಿಂದ ತಾಲೀಮು ನಡೆಸಲಾಗುತ್ತಿದೆ.
ಅ. 15 ರಿಂದ 21 ರವರೆಗೆ ದಸರಾ ಕುಸ್ತಿ ಪಂದ್ಯಾವಳಿ ಆರು ದಿನಗಳ ಕಾಲ ಸಿಎಂ ಕಪ್, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ಕುಮಾರ ಹಾಗೂ ಕಿಶೋರಿ ಕುಸ್ತಿ ಪಂದ್ಯಾವಳಿ ನಡೆಯಲಿದೆ
ದಸರಾ ಕುಸ್ತಿ ಉಪಸಮಿತಿಯ ವಿಶೇಷಾಧಿಕಾರಿ ಅಪರ ಪೊಲೀಸ್ ಅಧೀಕ್ಷಕಿ ಡಾ.ಬಿ.ಎನ್.ನಂದಿನಿ ಸುದ್ದಿಗಾರೊಂದಿಗೆ ಮಾತನಾಡಿ ಅ. 15ರಿಂದ 21 ರವರಗೆ ನಡೆಯಲಿರುವ ಈ ಕುಸ್ತಿ ಪಂದ್ಯಗಳನ್ನು ಮುಖ್ಯಮಂತ್ರಿ ಚಾಲನೆ ನೀಡುವರು.ಅ. 16 ರಂದು ಬೆಳಿಗ್ಗೆ8 ರಿಂದ ಮದ್ಯಾಹ್ನ 2 ರವರೆಗೆ ಕುಸ್ತಿಪಟುಗಳ ದೇಹ ತೂಕ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ದಸರಾ ಕಂಠೀರವ ಹಾಗೂ ಮೈಸೂರು ವಿಭಾಗದ ದಸರಾ ಕುಮಾರ್, ದಸರಾ ಕಿಶೋರಿ ತೂಕ ತೆಗೆದುಕೊಳ್ಳಲಾಗುವುದು. ಅಂದೇ ಸಿಎಂ ಕಪ್ ಕುಸ್ತಿ ಪಂದ್ಯಾವಳಿ ಸಹ ನಡೆಯಲಿದೆ ಎಂದರು.