ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.26:
ದೇವನಹಳ್ಳಿಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣದ ಟರ್ಮಿನಲ್1ರ ಆಗಮನ ದ್ವಾರದ ಪಿಕಪ್ ಪ್ರದೇಶದ ಉಚಿತ ಪಾರ್ಕಿಂಗ್ ಸಮಯವನ್ನು ಹೆಚ್ಚು ಮಾಡಿ ಬಿಐಎಎಲ್ ಆದೇಶ ಹೊರಡಿಸಿದೆ.
ಬದಲಾದ ಸಮಯದ ಆದೇಶ ಶುಕ್ರವಾರದಿಂದಲೇ ಜಾರಿಯಾಗಿದೆ. ಇದುವರೆಗೂ 10 ನಿಮಿಷ ಉಚಿತ ಪಾಕಿಂಗ್ ನೀಡಲಾಗುತ್ತಿಿತ್ತು. ಈಗ ಇದನ್ನು 15 ನಿಮಿಷಕ್ಕೆೆ ಹೆಚ್ಚಳ ಮಾಡಲಾಗಿದೆ.
ವಾಣಿಜ್ಯ ವಾಹನಗಳು ಮತ್ತು ಟ್ಯಾಾಕ್ಸಿಿ ಸೇವೆಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣ ಪ್ರಾಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಮತ್ತು ಈ ಸೌಲಭ್ಯ ಬಳಸುವ ಇತರರ ಪ್ರತಿಕ್ರಿಿಯೆ ಆಧರಿಸಿ ಸಮಯ ಪರಿಷ್ಕರಿಸಲಾಗಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿಿನಲ್ಲಿ ಈ ಬದಲಾವಣೆ ಮಾಡಲಾಗಿದೆ.
ಡಿಸೆಂಬರ್ 13ರಂದು ಟಮ್ನಿಿಲ್ 1ರಲ್ಲಿ ಜಾರಿಗೆ ತರಲಾದ ಹೊಸ ಪಿಕಪ್ ನಿಯಮಗಳ ಪ್ರಕಾರ, ವಾಣಿಜ್ಯ ವಾಹನಗಳು ಗೊತ್ತುಪಡಿಸಿದ ಪಾರ್ಕಿಂಗ್ ವಲಯಗಳಾದ ಪಿ3 ಮತ್ತು ಪಿ4ರಲ್ಲಿ ಕಾಯಬೇಕಿತ್ತು. ಅಲ್ಲಿ ಆ ವಾಹನಗಳಿಗೆ 10 ನಿಮಿಷಗಳ ಉಚಿತ ಪಾರ್ಕಿಂಗ್ ಸೌಲಭ್ಯ ನೀಡಲಾಗಿತ್ತು. ಈಗ ಅದನ್ನು 15 ನಿಮಿಷಗಳಿಗೆ ವಿಸ್ಗತರಿಸಲಾಗಿದೆ. ಇದರ ನಂಗತರ ಕ್ಯಾಾಬ್ ಚಾಲಕರು ಮೊದಲ ಅರ್ಧಗಂಟೆಯ ಸ್ಲಾಾಟ್ಗೆ 100 ಮತ್ತು ಆ ನಂತರದ ಹೆಚ್ಚುವರಿ ಪ್ರತಿ ಗಂಟೆಗೆ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ.

