ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.30:
ರಾಜ್ಯದಲ್ಲಿ ಸೋಯಾಬೀನ್, ಶೇಂಗಾ, ಹೆಸರುಕಾಳು, ಉದ್ದು ಹಾಗೂ ಸೂರ್ಯಕಾಂತಿ ಬೆಳೆಗಳ ಖರೀದಿ ಅವಧಿ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
2025-26 ಮುಂಗಾರು ಅವಧಿಗೆ ಕರ್ನಾಟಕ ರಾಜ್ಯದಲ್ಲಿ ಬೆಂಬಲ ಬೆಲೆ ಯೋಜನೆ (ಪಿಎಸ್ಎಸ್) ಅಡಿಯಲ್ಲಿ ಸೋಯಾಬೀನ್ ಮತ್ತು ಶೇಂಗಾ ಖರೀದಿ ಅವಧಿಯನ್ನು ಜ.26 ರವರೆಗೆ ಹಾಗೂ ಹೆಸರು ಕಾಳು, ಉದ್ದು ಮತ್ತು ಸೂರ್ಯಕಾಂತಿ ಖರೀದಿ ಅವಧಿಯನ್ನು ಜ.22 ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಿದೆ.
ಪೂರ್ವ ನೋಂದಾಯಿತ ರೈತರಿಂದ ಮಾತ್ರ ಖರೀದಿ ನಡೆಸುವಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ವಿಸ್ತರಿಸಿದ ಅವಧಿಯೊಳಗೆ ಖರೀದಿ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಆದೇಶ ನೀಡಲಾಗಿದೆ.
ಕೃಷಿ ಸಚಿವ ಎನ್. ಚಲುವರಾಯಸ್ವಾಾಮಿಯವರು ಖರೀದಿ ಅವಧಿ ವಿಸ್ತರಿಸುವಂತೆ ಕೇಂದ್ರಕ್ಕೆೆ ಪತ್ರ ಬರೆದಿದ್ದರು. ಈ ಪತ್ರಕ್ಕೆೆ ಸ್ಪಂದಿಸಿ ನಿನ್ನೆೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ರವರು ಸಚಿವ ಚಲುವರಾಯಸ್ವಾಾಮಿಯವರಿಗೆ ದೂರವಾಣಿ ಕರೆ ಮಾಡಿ ತಮ್ಮ ಮನವಿ ಪುರಸ್ಕರಿಸಿರುವುದಾಗಿ ತಿಳಿಸಿದ್ದಾರೆ.

