ಸುದ್ದಿಮೂಲವಾರ್ತೆ
ಕೊಪ್ಪಳ,ಜು.28: 2020 ರಲ್ಲಿ ಜಾರಿಗೆ ಬಂದ ಎನ್ ಇಪಿಯ ಶಿಕ್ಷಣ ಅಮೂಲಾಗ್ರ ಬದಲಾವಣೆ ತರುತ್ತಿದೆ. ಈ ಅದರ 3 ನೆಯ ವರ್ಷಾಚರಣೆಯನ್ನು ಮಾಡಲಾಗುತ್ತಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಸಿದ್ದಾರೂಢ ಮೇತ್ರಿ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾಹಿತಿ ನೀಡಿ ಎನ್ ಇಪಿಯಿಂದ ಶಿಕ್ಷಣ ಪಡೆದ ವಿದ್ಯಾರ್ಥಿಯು ಉದ್ಯೋಗವನ್ನು ಕಲಿಯುತ್ತಿದ್ದೇವೆ. ಎನ್ ಇಪಿದ ಉದ್ದೇಶವು ವಿಶ್ವ ಮಟ್ಟದಲ್ಲಿ ಜ್ಞಾನ ಹಾಗು ಬದುಕಲು ಬೇಕಾಗುವ ಶಿಕ್ಷಣ ನೀಡುತ್ತದೆ ಎಂದು ಹೇಳಿದರು.
2021 ರ ಆತ್ಮನಿರ್ಭಾರ ಯೋಜನೆಯಲ್ಲಿ ಮಕ್ಕಳಲ್ಲಿ ಆತ್ಮಬಲ ಹಾಗು ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳುವ ಶಿಕ್ಷಣ ನೀಡಲಾಗುವುದು.
ಭಾರತದಲ್ಲಿ 1250 ಕೇಂದ್ರೀಯ ವಿದ್ಯಾಲಯಗಳಿವೆ. ಕೇಂದ್ರೀಯ ವಿದ್ಯಾಲಯವು ಎನ್ ಇ ಪಿಯನ್ನು ಜಾರಿಗೆ ತಂದಿದೆ. ಕೊಪ್ಪಳದ ಕೇಂದ್ರೀಯ ವಿದ್ಯಾಲಯವು ಉತ್ತಮ ವಿದ್ಯಾಲಯವಾಗಿದೆ.
ನಾಳೆ ದೆಹಲಿಯಲ್ಲಿ ಎನ್ ಇ ಪಿ ಮೂರನೆಯ ವರ್ಷಾಚರಣೆಯನ್ನು ರಾಷ್ಟ್ರಪತಿಗಳು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೊಪ್ಪಳ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗು 8 ಪ್ರೌಢಶಾಲೆಯ ಶಿಕ್ಷಕರಿದ್ದಾರೆ. ಇನ್ನೂ 16 ಶಿಕ್ಷಕರಿದ್ದಾರೆ. ಕೇಂದ್ರೀಯ ವಿದ್ಯಾಲಯದಲ್ಲಿ ಸಾಕಷ್ಟು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಡಾ ಚಕ್ರವರ್ತಿ, ಸೈಯದ್ ರಿಯಾಜ್, ಜಯಶ್ರೀ ಇದ್ದರು.