ಸುದ್ದಿಮೂಲ ವಾರ್ತೆ ಕೊಪ್ಪಳ, ನ.22:
ಕೊಪ್ಪಳ ಜಿಲ್ಲಾಾಸ್ಪತ್ರೆೆಯಲ್ಲಿ ವ್ಹೀಲ್ಚೇರ್ ಇಲ್ಲದೆ ರೋಗಿಗಳು ಪರದಾಟ ನಡೆಸಿದ್ದು. ಮೂರ್ಛೆ ರೋಗ ಬಂದಿರುವ ರೋಗಿಯನ್ನ 3ನೇ ಮಹಡಿಯಿಂದ ಹೊತ್ತು ಸಾಗಿಸಿದ ಘಟನೆ ನಡೆದಿದೆ.
ನಿನ್ನೆೆ ರಾತ್ರಿಿ ಕೊಪ್ಪಳ ತಾಲೂಕಿನ ಇಂದಿರಾನಗರ ತಾಂಡಾದ ಯಮನವ್ವ ಎಂಬುವವರಿಗೆ ಮೂರ್ಛೆ ರೋಗ ಬಂದಿದೆ. ಈ ವೇಳೆ ಆಕೆಯನ್ನು ಮಗ 3 ನೆಯ ಮಹಡಿಯ ವಾರ್ಡಿನಿಂದ ನೆಲಮಹಡಿಯಲ್ಲಿರುವ ತುರ್ತು ಚಿಕಿತ್ಸಾಾ ಘಟಕಕ್ಕೆೆ ಸಾಗಿಸಿದ್ದಾಾನೆ. ವ್ಹೀಲ್ ಚೇರ್ ಇಲ್ಲದೆ ರೋಗಿಯನ್ನು ಸಾಗಿಸಿರುವ ವಿಡಿಯೋ ವೈರಲ್ ಆಗಿ ಈ ಸಂದರ್ಭದಲ್ಲಿ ಜಿಲ್ಲಾಾಸ್ಪತ್ರೆೆ ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ದ ಆಕ್ರೋೋಶ ವ್ಯಕ್ತ ವಾಗಿದೆ.
ಈ ಬಗ್ಗೆೆ ಪ್ರತಿಕ್ರಿಿಯಿಸಿದ ತಾಯಿಯನ್ನು ಹೊತ್ತುಕೊಂಡು ಬಂದಿರುವ ಯುವಕ ಕೃಷ್ಣ ನಮ್ಮ ತಾಯಿಗೆ ತಕ್ಷಣ ಅನಾರೋಗ್ಯ ಕಾಣಿಸಿಕೊಂಡಿತು. ಈ ವೇಳೆ ಏನು ಮಾಡಬೇಕೆಂದು ತಿಳಿಯದೆ ನಾನೇ ಹೊತ್ತುಕೊಂಡು ಬಂದೆ. ನಾನು ಇಲ್ಲಿ ವೈದ್ಯರಿಗೆ ಹಾಗು ಸಿಬ್ಬಂದಿಗಳಿಗೆ ತಿಳಿಸಿಲ್ಲ ಎಂದು ಉಲ್ಟಾಾ ಹೊಡೆದಿದ್ದಾಾರೆ.
ಯಮನವ್ವ ತೀವ್ರ ಕೈ- ಕಾಲು ನೋವು ಎಂದು ಚಿಕಿತ್ಸೆೆಗೆ ದಾಖಲಾಗಿದ್ದರು, ಇದೀಗ ಯಾರೋ ಸುಖಾಸುಮ್ಮನೆ ವಿಡಿಯೋ ಮಾಡಿ ವ್ಹೀಲ್ ಚೇರ್ ಇಲ್ಲದಕ್ಕೆೆ ರೋಗಿ ಪರದಾಟ ಅಂತಾ ಹೇಳಿದ್ದಾಾರೆ.
ಈ ಬಗ್ಗೆೆ ಪ್ರತಿಕ್ರಿಿಯಿಸಿದ ಕಿಮ್ಸ್ ನಿರ್ದೇಶಕ ವಿಜಯನಾಥ ಇಟಗಿ ಜಿಲ್ಲಾಾಸ್ಪತ್ರೆೆಯಲ್ಲಿ ವ್ಹೀಲ್ ಚೇರ್ ಕೊರತೆ ಇಲ್ಲ. ಈ ಘಟನೆಯ ಬಗ್ಗೆೆ ನಾವು ಸಮಗ್ರ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾಾರೆ.

