ಸುದ್ದಿಮೂಲ ವಾರ್ತೆ
ಆನೇಕಲ್, ಜು.30: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕೆಎಸ್ಆರ್ಟಿಸಿ ಆನೇಕಲ್ ಘಟಕದಲ್ಲಿ ಇಂದು ನಿವೃತ್ತ ಕಾರ್ಮಿಕರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕೆಎಸ್ಆರ್ಟಿಸಿ ಎಂಪ್ಲಾಯಿಸ್ ಯೂನಿಯನ್ ಆನೇಕಲ್ ಘಟಕ ಮತ್ತು ಕನ್ನಡ ಕ್ರಿಯಾ ಸಮಿತಿ ಸಹಯೋಗ ದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆನೇಕ ವರ್ಷಗಳಿಂದ ನಿಗಮದಲ್ಲಿ ಕಾರ್ಯ ನಿರ್ವಹಿಸಿದ ಒಂಭತ್ತು ಮಂದಿ ನೌಕರರು ಕಾರ್ಮಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಪದ್ಮನಾಭ, ನಮ್ಮ ತಂದೆ ಸಹ ಕಂಡಕ್ಟರ್ ಆಗಿದ್ದರು. ಮೊದಲನೇ ಬಾರಿಗೆ ನಮ್ಮಣ್ಣ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಕೆಎಸ್ಆರ್ಟಿಸಿ ಕಾಲೋನಿಯಿಂದಲೇ ಗೆಲುವು ಸಾಧಿಸಿದ್ದು ಅಲ್ಲಿಂದ ನಮ್ಮ ರಾಜಕೀಯ ಜೀವನ ಪ್ರಾರಂಭವಾಯಿತು. ]ಕೆಎಸ್ಆರ್ಟಿಸಿ ಸಂಸ್ಥೆಯಿಂದ ಸಾಕಷ್ಟು ಅಬಾರಿಯಾಗಿದ್ದೇವೆ. ಅದರಿಂದ ನಾವು ಒಂದು ನೆಲೆಯನ್ನು ಕಂಡುಕೊಂಡಿದ್ದೇವೆ ಮತ್ತು ಜೀವನವನ್ನು ಕಟ್ಟಿಕೊಳ್ಳಲು ನಮಗೆ ಸಾಕಷ್ಟು ಸಹಕಾರಿಯಾಗಿದೆ. ಅಂತಹ ಕಾರ್ಮಿಕರಿಗೆ ಮತ್ತು ನೌಕರಿಗೆ ಸನ್ಮಾನ ಮಾಡಿದ್ದು ಖುಷಿ ತಂದಿದೆ ಎಂದು ತಿಳಿಸಿದರು.
ಸಮಾಜ ಸೇವಕರಾದ ಟಿವಿ ಬಾಬು ಮಾತನಾಡಿ, ನಮ್ಮಣ್ಣ ಸಹ ಚಾಲಕರಾಗಿದ್ದರು. ಅದರಿಂದ ನಮ್ಮ ಕುಟುಂಬ ಸಹ ಜೀವನ ಕಟ್ಕೊಳ್ಳೋದಕ್ಕೆ ತುಂಬಾ ಉಪಯುಕ್ತ ಆಗಿತ್ತು. ಕೆಎಸ್ಆರ್ಟಿಸಿ ಸಂಸ್ಥೆಗೆ ತುಂಬಾ ಆಭಾರಿಯಾಗಿದ್ದೇವೆ ಎಂದ ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಆನೇಕಲ್ ಘಟಕದ ಅಧಿಕಾರಿಗಳು, ನಿವೃತ್ತ ನೌಕರರ ಕುಟುಂಬಸ್ಥರು ಭಾಗಿಯಾಗಿದ್ದರು.