ಸುದ್ದಿಮೂಲ ವಾರ್ತೆ ಬೀದರ್, ಡಿ.06:
ಬೆಳೆ ಪರಿಹಾರ ಹಾಗೂ ಕಿಸಾನ್ ಸಮ್ಮಾಾನ್ ನಿಧಿ ಹಣವನ್ನು ಬ್ಯಾಾಂಕ್ ಗಳು ರೈತರ ಸಾಲಕ್ಕೆೆ ಕಟ್ಟಿಿ ಹಾಕುತ್ತಿಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.
ಈ ಕುರಿತು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಬ್ಯಾಾಂಕ್ಗಳ ಮೂಲಕ ರೈತರ ಖಾತೆಗಳಿಗೆ ಜಮೆಯಾದ ಹಣವನ್ನು ವಶಪಡಿಸಿಕೊಳ್ಳಲಾಗುತ್ತಿಿದೆ. ಅದೇ ರೀತಿ, ಕಿಸಾನ್ ಸಮ್ಮಾಾನ್ ನಿಧಿಯನ್ನು ಸಾಲಕ್ಕೆೆ ಕಟ್ಟಿಿ ಹಾಕಲಾಗುತ್ತಿಿದೆ. ಕೂಡಲೇ ಬ್ಯಾಾಂಕ್ಗಳಿಗೆ ಹಣ ತಡೆ ಹಿಡಿಯದಂತೆ ಸೂಚನೆ ನೀಡಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ಕಂದಾಯ-ಕೃಷಿ ಇಲಾಖೆಗಳ ಅಸಮರ್ಪಕ ಸಂಯೋಜನೆಯಿಂದ ರೈತರಿಗೆ ಸಮರ್ಪಕವಾಗಿ ಪರಿಹಾರ ತಲುಪಿಲ್ಲ. ತಕ್ಷಣ ವಿತರಣೆ ಮಾಡಬೇಕು. ಹಾಗೇ ಜಿಲ್ಲಾಡಳಿತ ನಿರ್ಣಯಿಸಿದಂತೆ ಟನ್ ಕಬ್ಬಿಿಗೆ 2950 ಬದಲು ಕೆಲವು ಕಾರ್ಖಾನೆಗಳು 2500-2700 ಮಾತ್ರ ಪಾವತಿ ಮಾಡುತ್ತಿಿವೆ.
ನಿಗದಿತ ದರ ಕಟ್ಟುನಿಟ್ಟಾಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಸೋಯಾಬಿನ್, ಉದ್ದು, ಹೆಸರು ಖರೀದಿಯಲ್ಲಿ ಪ್ರತಿ ಕ್ವಿಿಂಟಲ್ 100 ಮತ್ತು 2 ಕೆಜಿ ಕಡತ ಕಸಿವು-ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಾಮಪ್ಪಾಾ ಆಣದೂರೆ, ಪ್ರಮುಖರಾದ ದಯಾನಂದ ಸ್ವಾಾಮಿ ಸಿರ್ಸಿ, ಶ್ರೀಮಂತ ಬಿರಾದಾರ, ಶಂಕರೆಪ್ಪಾಾ ಪಾರಾ, ಶೋಭಾವತಿ ಕಾರಭಾರಿ, ಚಂದ್ರಶೇಖರ ಜಮಖಂಡಿ, ಸುಭಾಷ ರಗಟೆ, ನಾಗಯ್ಯಾಾ ಸ್ವಾಾಮಿ, ಪ್ರವೀಣ ಕುಲಕರ್ಣಿ, ಶಿವಾನಂದ ಹುಡಗೆ, ಬಸಪ್ಪಾಾ ಮರಖಲ್, ಪ್ರಕಾಶ ಬಾವಗೆ, ಶಿವರಾಜ ಡೊಂಗರಗಾಂವ, ಮಲ್ಲಿಕಾರ್ಜುನ ಚಕ್ಕಿಿ, ವಿಶ್ವನಾಥ ಧರಣೆ ಮತ್ತು ಅನೇಕ ರೈತ ಸಂಘದವರು ಉಪಸ್ಥಿಿತರಿದ್ದರು.
ಬ್ಯಾಾಂಕ್ಗಳಿಂದ ಬೆಳೆ ಪರಿಹಾರ ತಡೆ ರೈತ ಸಂಘದಿಂದ ಸಚಿವ ಖಂಡ್ರೆಗೆ ಕ್ರಮಕ್ಕೆ ಒತ್ತಾಯ

