ಸುದ್ದಿಮೂಲ ವಾರ್ತೆ ಬೀದರ್ , ಜ.06:
ಅಷ್ಟೂರ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕರು ಸಹಕಾರ ಸಂಘಗಳ ಕಾಯ್ದೆೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಸಂಘಕ್ಕೆೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿರುವ ಆರೋಪದ ಮೇಲೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಬೀದರ್ ಜಿಲ್ಲಾ ಘಟಕ ಒತ್ತಾಾಯಿಸಿದೆ.
ಸಂಘದ ಅವಶ್ಯಕತೆ ಇಲ್ಲದಿದ್ದರೂ ಮಾರುಕಟ್ಟೆೆ ದರಕ್ಕಿಿಂತ ಸುಮಾರು ಎಂಟು ಪಟ್ಟು ಹೆಚ್ಚು ಹಣ ನೀಡಿ ಜಮೀನು ಖರೀದಿ ಮಾಡಲಾಗಿದೆ ಎಂದು ರೈತ ಸಂಘ ಆರೋಪಿಸಿದೆ. ದಿನಾಂಕ 3-11-2025 ರಂದು ಅಷ್ಟೂರ ಗ್ರಾಾಮದ ಸರ್ವೆ ನಂ. 142/*/10 ರಲ್ಲಿರುವ 1 ಗುಂಟೆ 08 ಆಣಾ ಜಮೀನನ್ನು ಸುಮಾರು 20 ಲಕ್ಷ ರೂ.ಗೆ ಖರೀದಿಸಲಾಗಿದೆ. ಆದರೆ ಆ ಜಮೀನಿನ ಸರ್ಕಾರಿ ಮೌಲ್ಯ ಕೇವಲ 2.50 ಲಕ್ಷ ರೂ. ಮಾತ್ರವಾಗಿದ್ದು, ಮಾರುಕಟ್ಟೆೆ ದರವೂ ಸುಮಾರು 5 ಲಕ್ಷ ರೂ. ಇರುವುದಾಗಿ ತಿಳಿಸಲಾಗಿದೆ.
ಸಂಘ ಲಾಭದಲ್ಲಿದ್ದಾಗ ಶಿಕ್ಷಣ ನಿಧಿ, ಅಪಾಯ ನಿಧಿ ಸೇರಿದಂತೆ ಕಡ್ಡಾಾಯ ನಿಧಿಗಳನ್ನು ರೂಪಿಸಿ ಷೇರುದಾರರಿಗೆ ಲಾಭ ಹಂಚಿಕೆ ಮಾಡಬೇಕಾಗಿದ್ದರೂ, ಅದನ್ನು ಪಾಲಿಸದೇ ಅನಾವಶ್ಯಕ ಆಸ್ತಿಿ ಖರೀದಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ನಿಬಂಧಕರು ಹಾಗೂ ನಿಬಂಧಕರ ಅನುಮತಿ ಪಡೆಯದೇ ಆಸ್ತಿಿ ಖರೀದಿ ಮಾಡಿರುವುದು ಗಂಭೀರ ನಿಯಮ ಉಲ್ಲಂಘನೆಯಾಗಿದೆ.
ಈ ಎಲ್ಲಾ ಅಕ್ರಮಗಳ ಹಿನ್ನೆೆಲೆಯಲ್ಲಿ ಸಂಘದ ಆರ್ಥಿಕ ಸ್ಥಿಿರತೆಯನ್ನು ಹದಗೆಡಿಸಿರುವ ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಾಹಕರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ರೈತ ಸಂಘದ ಬೀದರ ತಾಲೂಕಾ ಉಪಾಧ್ಯಕ್ಷ ಬಸವರಾಜ ಬೆಳ್ಳೂರು ಪತ್ರಿಿಕಾ ಪ್ರಕಟಣೆಯ ಮೂಲಕ ಒತ್ತಾಾಯಿಸಿದ್ದಾರೆ.
ಭಾರೀ ಮೊತ್ತಕ್ಕೆ ಜಮೀನು ಖರೀದಿ ಆರೋಪ ಅಷ್ಟೂರ ಪಿಕೆಪಿಎಸ್ ವಿರುದ್ಧ ಕ್ರಮಕ್ಕೆ ರೈತ ಸಂಘ ಒತ್ತಾಯ

