ಸುದ್ದಿಮೂಲ ವಾರ್ತೆ ಬಳ್ಳಾರಿ, ನ.03:
ಗೋಕಟ್ಟೆೆ, ಚೆಕ್ ಡ್ಯಾಾಂ, ಕಂದಕ ಬದು ನಿರ್ಮಾಣ ಇನ್ನು ಹಲವಾರು ಕಾಮಗಾರಿಗಳನ್ನು ನಿರ್ಮಾಣ ಮತ್ತು ನಿರ್ವಹಣೆ ಕೇವಲ ಸರ್ಕಾರದ್ದಲ್ಲ, ರೈತರದ್ದೂ ಎಂದು ಜಿಲ್ಲಾಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾಾರೆ.
ರೂಪನಗುಡಿ ಹೋಬಳಿಯ ಯಾಳ್ಪಿಿ ಕಗ್ಗಲ್ಲು ಗ್ರಾಾಮದಲ್ಲಿ ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿಿ ಅಡಿ ವಾಟರ್ಶೆಡ್ ಮಹೋತ್ಸವ ಅಭಿಯಾನ ಕಾರ್ಯಕ್ರಮವನ್ನು ಬುಧವಾರ ಉದ್ಘಾಾಟಿಸಿ ಅವರು ಮಾತನಾಡಿದರು.
ರೈತ ಉತ್ಪಾಾದಕ ಸಂಘವನ್ನು ರಚನೆ ಮಾಡಬೇಕು. ಪಿಎಂಎ್ಎಂಇ ಯೋಜನೆಯನ್ನು ರೈತ ಮಹಿಳೆಯರು ಹಾಗೂ ಸ್ವ ಸಹಾಯ ಸಂಘದವರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮಣ್ಣಿಿನ ಗುಣಲಕ್ಷಣ ಕಾಪಾಡಲು ರೈತರು ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ವ್ಯವಸಾಯವು ಕೈಗಾರಿಕೆ ಹಾಗೂ ಇತರೆ ವಲಯಗಳಿಗಿಂತ ಅತಿ ಮುಖ್ಯ ವಲಯ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಕೆ.ಎಂ. ಸೋಮಸುಂದರ್ ಅವರು ಅಧ್ಯಕ್ಷತೆ ವಹಿಸಿ, ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳಾದ ಕ್ಷೇತ್ರಬದು ನಿರ್ಮಾಣ (1029.93 ಹೆ), ಚೆಕ್ ಡ್ಯಾಾಂ (17 ಸಂಖ್ಯೆೆ), ಗೋಕಟ್ಟೆೆಗಳ ನಿರ್ಮಾಣ (30 ಸಂಖ್ಯೆೆ) ಹಾಗೂ ಪಿ.ಟಿ.(9 ಸಂಖ್ಯೆೆ)ಗಳನ್ನು ನಿರ್ಮಿಸಲಾಗಿದೆ. 74 ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ನೀಡಲಾಗಿದೆ ಎಂದು ಯೋಜನೆಯ ಮಾಹಿತಿ ಹಂಚಿಕೊಂಡರು.
ಹಗರಿಯ ಕೃಷಿ ವಿಜ್ಞಾಾನ ಕೇಂದ್ರದ ಮುಖ್ಯಸ್ಥ ಹಾಗೂ ಕೃಷಿ ವಿಜ್ಞಾಾನಿ ಡಾ. ಪಾಲಯ್ಯ, ಡಾ.ರವಿ ಹಾಗೂ ಡಾ. ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಬಗ್ಗೆೆ ತಾಂತ್ರಿಿಕ ಅಧಿವೇಶನ ಏರ್ಪಡಿಸಲಾಯಿತು.
ಹಗರಿ ಾರ್ಮನ ಸರ್ಕಾರಿ ಪ್ರೌೌಢಶಾಲೆಯ ಶಾಲಾ ಮಕ್ಕಳಿಗೆ ರಸಪ್ರಶ್ನೆೆ ಕಾರ್ಯಕ್ರಮ ಹಾಗೂ ಗ್ರಾಾಮದ ಸ್ವಸಹಾಯ ಸಂಘದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಸೋಮವಾರ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಪ್ರಶಸ್ತಿಿಪತ್ರ ಹಾಗೂ ಬಹುಮಾನ ವಿತರಿಸಿದರು.
ಉಪ ಕೃಷಿ ನಿರ್ದೇಶಕ ಎಸ್.ಎನ್.ಮಂಜುನಾಥ ಅವರು ಮಣ್ಣು ನೀರು ಮತ್ತು ಸ್ವಾಾಭಾವಿಕ ಸಂಪನ್ಮೂಲಗಳ ಸಂರಕ್ಷಣೆಯ ಪ್ರತಿಜ್ಞಾಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾಾರಿ ತಾಲ್ಲೂಕು ಕೃಷಿಕ ಸಮಾಜ ನಿರ್ದೇಶಕರಾದ ಸಮುದ್ರರಾಜ, ವೈ.ಗೋಪಾಲರೆಡ್ಡಿಿ ಹಾಗೂ ಗ್ರಾಾಮ ಪಂಚಾಯಿತಿ ಉಪಾಧ್ಯಕ್ಷೆ ಲಿಂಗಮ್ಮ ಪೂಜಾರಿ, ಮಾಜಿ ಅಧ್ಯಕ್ಷ ಸೋಮಲಿಂಗಪ್ಪ, ಸದಸ್ಯರಾದ ಶಂಕರಗೌಡ, ಪದ್ಮಾಾವತಿ ಕರಿಬಸವನಗೌಡ, ಕೆ ಬಸವನಗೌಡ, ಲಕ್ಷ್ಮಿಿ ಮಹಾಲಿಂಗ, ಲಕ್ಷ್ಮಿಿ ದ್ಯಾಾವಣ್ಣ, ಗ್ರಾಾಮದ ರೈತರಾದ ಲೋಕನಗೌಡ, ಜನಾರ್ಧನರೆಡ್ಡಿಿ ಉಪಸ್ಥಿಿತರಿದ್ದರು.
ರೈತರು ಕೃಷಿ ಕಾಮಗಾರಿಗಳ ನಿರ್ವಹಣೆಗೆ ಮುಂದಾಗಬೇಕು

