ಸುದ್ದಿಮೂಲ ವಾರ್ತೆ
ಕುಷ್ಟಗಿ, ಆ.26:ಕರ್ನಾಟಕ ಮುಸ್ಲಿಂ ಯೂನಿಟಿ ಕುಷ್ಟಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಫಾರೂಖ್ ತಂದೆ ಮೈನುದ್ದೀನ್ ಚೌದ್ರಿ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಮುಸ್ಲಿಂ ಯೂನಿಟಿ(ರಿ) ಸಂಘವು ಕರ್ನಾಟಕ ರಾಜ್ಯಾದ್ಯಂತ ಮುಸ್ಲಿಂ ಸಮಾಜವನ್ನು ಸಂಘಟಿಸಿ, ಸಮಾಜದ ಹಕ್ಕುಗಳಿಗಾಗಿ ಹೋರಾಟ ಮಾಡುವ ಒಂದು ಸಂಘವಾಗಿದೆ. ಸದರಿ ಸಂಘದ ಧೈಯೋದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನಿನ ಚೌಕಟ್ಟಿನಲ್ಲಿ ಸಂಘದ ನೀತಿ ನಿಯಮಗಳಿಗನುಸಾರ ಸಮಾಜದ ಹಿರಿಯ-ಕಿರಿಯರನ್ನು ಸಂಘಟಿಸಿ, ಸಂಘವನ್ನು ಬಲಪಡಿಸುವ ಹೊಣೆಗಾರಿಕೆಯನ್ನು ತಮಗೆ ನೀಡಲಾಗಿದೆ. ಕುಷ್ಟಗಿ ತಾಲೂಕಿನಾದ್ಯಂತ “ಕರ್ನಾಟಕ ಮುಸ್ಲಿಂ ಯೂನಿಟಿ” ಸಂಘಟನೆ ಮಾಡಲು ಜಿಲ್ಲಾ ಹಾಗೂ ರಾಜ್ಯ ಸಮಿತಿಗಳಿಗೆ ತಾವು ಅಗತ್ಯ ಸಹಕಾರ ನೀಡಬೇಕು. ಕೂಡಲೇ ಕುಷ್ಟಗಿ ತಾಲೂಕಿನ ಮುಸ್ಲಿಂ ಸಮಾಜದ ಹಿರಿಯರು, ಯುವಕರು ಹಾಗೂ ಮುಸ್ಲಿಂ ಮೌಲ್ವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಚುರುಕುಗೊಳಿಸಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಮಹ್ಮದ್ ಜಿಲಾನ್ ಕಿಲ್ಲೇದಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.