ಸುದ್ದಿಮೂಲ ವಾರ್ತೆ ಭಾಲ್ಕಿ, ೆ.04:
ಬೈಕ್ಗೆ ಸೈಡ್ ಕೊಡಲಿಲ್ಲ ಎಂದು ಕೆಕೆಆರ್ಟಿಸಿ ಬಸ್ ಡ್ರೈವರ್ ಮೇಲೆ ಬೈಕ್ ಸವಾರರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬೀರಿ ಕೆ ಗ್ರಾಾಮದ ಬಳಿ ಬುಧವಾರ ನಡೆದಿದೆ.
ಬಸ್ ಡ್ರೈವರ್ ಚಂದ್ರಶೇಖರ್ ಸ್ವಾಾಮಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದ್ದು, ಭಾಲ್ಕಿಿ ಸರ್ಕಾರಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ನೀಡಲಾಗುತ್ತಿಿದೆ.
ಸಾರಿಗೆ ಬಸ್ ಭಾಲ್ಕಿಿಯಿಂದ ಚಂದಾಪುರ, ಬಾಳೂರ ಮಾರ್ಗವಾಗಿ ಬೀದರ್ಗೆ ತೆರಳುತ್ತಿಿದ್ದಾಗ ಈ ಘಟನೆ ನಡೆದಿದೆ.
ಭಾಲ್ಕಿಿ ಗ್ರಾಾಮೀಣ ಪೊಲೀಸ್ ಠಾಣೆ ವ್ಯಾಾಪ್ತಿಿಯಲ್ಲಿ ಘಟನೆ ನಡೆದಿದೆ.
ಸಾರಿಗೆ ಬಸ್ಗೆ ಬೈಕ್ ಅಡ್ಡಲಾಗಿ ನಿಲ್ಲಿಸಿ ಚಾಲಕನ ಮೇಲೆ ಮನಸ್ಸೋೋ ಇಚ್ಛೆೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬಸ್ನಿಂದ ಕೆಳಗಡೆ ಎಳೆದು ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿಿದೆ.
ಈ ಕುರಿತು ವಿಶಾಲ್ ಸೇರಿ 8 ಜನರ ವಿರುದ್ಧ ಬಸ್ ನಿರ್ವಾಹಕ ಲಿಂಗರಾಜ್ ದೂರು ನೀಡಿದ್ದಾರೆ.
ಆಸ್ಪತ್ರೆೆಗೆ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

