ಗುರುಸ್ವಾಾಮಿ ಬೊಮ್ಮನಾಳ ಅರಕೇರಾ, ನ.06:
ರಾಜ್ಯ ಹೆದ್ದಾರಿ 61 ರಸ್ತೆೆಯುದ್ದಕ್ಕೂ ಆಳೆತ್ತರವಾಗಿ ಬೆಳೆದು ನಿಂತ ಜಾಲಿ ಗಿಡಗಳಿಂದ ವಾಹನ ಸವಾರರ ಸಂಚಾರಕ್ಕೆೆ ಇಕ್ಕಟ್ಟಿಿನ ಪರಿಸ್ಥಿಿತಿ ಎದುರಾಗಿದೆ.
ಅರಕೇರಾ – ಸಿರವಾರ ಮಾರ್ಗದ ನೂತನ ಮುಖ್ಯ ರಸ್ತೆೆಯ ಎರಡು ಬದಿಯಲ್ಲಿ ಜಾಲಿ ಗಿಡಗಳದ್ದೇ ಕಾರುಬಾರು. ರಸ್ತೆೆ ನಿರ್ಮಾಣ ಮಾಡಿದ ಗುತ್ತಿಿಗೆದಾರರಿಗೆ 5 ವರ್ಷಗಳ ನಿರ್ವಹಣೆಯ ಜವಾಬ್ದಾಾರಿ ಇದೆ. ಆದರೆ ರಸ್ತೆೆ ನಿರ್ಮಿಸಿದ ಎರಡೆ ವರ್ಷದಲ್ಲಿ ಕೆಆರ್ಸಿಎಲ್ ಇಲಾಖೆ ಹಾಗೂ ಗುತ್ತಿಿಗೆ ಪಡೆದ ಅಮ್ಮಾಾಪುರ ಕಂಪನಿಗೆ ಈ ರಸ್ತೆೆಯು ಬೇಡವಾದ ಕೂಸಾಗಿದೆ.
ರಸ್ತೆೆಯ ಬದಿ ಕಾಲ್ನಡಿಗೆಯಲ್ಲಿ ಮನುಷ್ಯರು ಹೋಗುವುದೇ ಕಷ್ಟವಾಗಿದೆ. ಇನ್ನೂ ರೈತರ ಎತ್ತಿಿನ ಬಂಡಿಗಳು, ದ್ವಿಿಚಕ್ರ ವಾಹನ, ಬಸ್ಸು, ಲಾರಿ, ಸೇರಿದಂತೆ ವಿವಿಧ ವಾಹನಗಳು ಓಡಾಡಲು ಸಮಸ್ಯೆೆ ಉಂಟಾಗಿದೆ. ಸುಗಮ ಸಂಚಾರಕ್ಕೆೆ ಜಾಲಿ ಗಿಡಗಳೇ ಮುಳ್ಳಾಾಗಿವೆ.ಇದರಿಂದ ವಾಹನ ಸವಾರರು ಅಪಾಯ ಎದುರಿಸುತ್ತಿಿದ್ದಾರೆ. ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತದ ಭೀತಿ ಎದುರಾಗಿದೆ. ಬೈಕ್ಗಳಲ್ಲಿ ಸಂಚರಿಸುವ ಸವಾರರಿಗೆ ಮುಳ್ಳುಗಳು ಕೈಕಾಲು, ಮುಖಕ್ಕೆೆ ತಾಗಿ ಗಾಯ ಮಾಡಿಕೊಂಡಿರುವ ನಿದರ್ಶನವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಜಂಗಲ್ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.
ಕಾಣಿಸದ ಸೂಚನಾಲಕಗಳು: ರಸ್ತೆೆಯ ಉದ್ದಕ್ಕೂ ಎರಡೂ ಬದಿ ಬೆಳೆದು ನಿಂತಿರುವ ಜಾಲಿ ಗಿಡ ಹಾಗೂ ಮರ ಬಳ್ಳಿಿಗಳಿಂದ ತಿರುವುಗಳಿರುವ ಕಡೆ ಅಳವಡಿಸಿರುವ ಎಚ್ಚರಿಕೆ ಲಕಗಳಾಗಲಿ, ರಸ್ತೆೆಯಲ್ಲಿ ಸಂಚರಿಸುವ ವಾಹನಗಳಾಗಲಿ ತೀರಾ ಹತ್ತಿಿರಕ್ಕೆೆ ಬರುವ ತನಕ ಕಾಣಿಸುತ್ತಿಿಲ್ಲ.ರಸ್ತೆೆಗೆ ಚಾಚಿಕೊಂಡಿರುವ ಗಿಡ ಬಳ್ಳಿಿ,ಮರದ ರೆಂಬೆಗಳನ್ನು ತೆರವುಗೊಳಿಸಿ ನಾಮಲಕಗಳು ಕಾಣಿಸುವಂತೆ ಮಾಡಬೇಕೆನ್ನುವುದು ವಾಹನ ಸವಾರರ ಕಳಕಳಿಯಾಗಿದೆ.
ಕೋಟ್ : ಅರಕೇರಾ – ಸಿರವಾರ ಮುಖ್ಯ ರಸ್ತೆೆಯ ಎರಡು ಬದಿಯಲ್ಲಿ ಹರಡಿರುವ ಜಾಲಿ ಗಿಡಗಳನ್ನು ತೆರವು ಮಾಡಲು ಸಂಬಂಧಿಸಿದ ಗುತ್ತಿಿಗೆದಾರರಿಗೆ ಸೂಚನೆ ನೀಡುತ್ತದೆ.ಸುಗಮ ಸಂಚಾರಕ್ಕೆೆ ಅನುಕೂಲ ಮಾಡಕೊಡಲಾಗುತ್ತದೆ.
-ಬಸವರಾಜ, ಇ.ಇ ಕೆಆರ್ಡಿಸಿಎಲ್ಕೆ ಕಲಬುರ್ಗಿ ವಿಭಾಗ.
ಅರಕೇರಾ – ಸಿರವಾರ ಮುಖ್ಯ ರಸ್ತೆೆಯಲ್ಲಿ ಅಪಘಾತದ ಭೀತಿ ‘ಜಾಲಿ’ ರೈಡ್ಗೆ ಅಡ್ಡಿಿ

