ಸುದ್ದಿಮೂಲ ವಾರ್ತೆ
ಆನೇಕಲ್, ಆ.25: ಕರ್ನಾಟಕ ರಿಪಬ್ಲಿಕ್ ಸೇನೆಯ ರಾಜ್ಯಾಧ್ಯಕ್ಷ ಮತ್ತು ಹಿರಿಯ ಹೋರಾಟಗಾರ ಜಿಗಣಿ ಶಂಕರ್ ಕೋಲಾರಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ ಸಾವನಪ್ಪಿದ್ದರು. ಇಂದು ಆನೇಕಲ್ ತಾಲೂಕಿನ ಜಿಗಣಿ ಬಂಡೆ ನಲ್ಲಸಂದ್ರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಲಾಗಿತ್ತು.
ಚಿಂತಕರು, ವಿಚಾರವಾದಿಗಳು, ದಲಿತ ಪರ ಹೋರಾಟದ ಮುಂಚೂಣಿಯಲ್ಲಿದ್ದ ಜಿಗಣಿ ಶಂಕರ್ ದರ್ಶನಕ್ಕೆ ಅಂಬೇಡ್ಕರ್ ಮೊಮ್ಮಗ ಆನಂದರಾಜ್ ಅಂಬೇಡ್ಕರ್, ಸಂಸದ ಡಿ.ಕೆ. ಸುರೇಶ್, ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹಾದೇವಪ್ಪ, ಮಾಜಿ ಸಚಿವ ಮಹೇಶ್, ಶಾಸಕ ಎ. ಶಿವಣ್ಣ, ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್, ಹೋರಾಟಗಾರರಾದ ಇಂದುದರ ಹೊನ್ನಪುರ, ಶ್ರೀನಿವಾಸ ಬಾನಂದೂರು, ಹರಿರಾಮ್, ರಿಪಬ್ಲಿಕ್ ಸೇನೆಯ ವೆಂಕಟೇಶ್ ಮೂರ್ತಿ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಪಾರ್ಥಿವ ಶರೀರವನ್ನ ಬಂಡೆ ನಲಸಂದ್ರದಿಂದ ಎಪಿಸಿ ಜಿಗಣಿ ಸರ್ಕಲ್ವರೆಗೆ ಮೆರವಣಿಗೆ ಮಾಡಲಾಯಿತು. ಬೌದ್ಧ ಧರ್ಮದ ಬಂತಂಜೆ ಅವರು ಪಂಚಶೀಲ ಬೋಧಿಸಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.