ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರು ಮಹಾನಗರ ಪಾಲಿಕೆ ವ್ಯಾಾಪ್ತಿಿಯ ವೃತ್ತಘಿ, ರಸ್ತೆೆಗಳಲ್ಲಿ ಪ್ಲಾಾಸ್ಟಿಿಕ್ ಪಾಲಿಥಿನ್ ಬ್ಯಾಾನರ್, ಬಂಟಿಂಗ್ಸ್ ಅಳವಡಿಕೆಯನ್ನು ನಿಷೇಧಿಸಿದ್ದು ತಡವಾಗಿಯಾದರೂ ಪಾಲಿಕೆ ನಿದ್ದೆೆಯಿಂದ ಥಟ್ಟನೆ ಎಚ್ಚರಗೊಂಡಂತಿದೆ.
ಕೊನೆಗೂ ಪಾಲಿಕೆ ದಿಟ್ಟ ನಿರ್ಧಾರ ಮಾಡಿದೆಯೋ, ಪರಿಸರ ನಿಯಂತ್ರಣ ಇಲಾಖೆಗೆ, ಬೇಸತ್ತವರಿಗೆ ನೆಪ ಮಾತ್ರದ ಆದೇಶ ತೋರಿಸಲು ಮತ್ತೊೊಮ್ಮೆೆ ಮುಂದಾಗಿದೆಯೇ ಎಂಬ ಚರ್ಚೆಯಂತೂ ಸದ್ಯ ಹೊರಡಿಸಿದ ನಿಷೇಧದ ಆದೇಶ ಹುಟ್ಟು ಹಾಕಿದೆ.
ಪರಿಸರದ ಮೇಲೆ ಹಾನಿಕಾರಕ ದುಷ್ಪಾಾರಿಣಾಮ ಬೀರುವುದರಿಂದ ರಾಯಚೂರು ನಗರದ ರಾಷ್ಟ್ರೀಯ, ರಾಜ್ಯ ಹೆದ್ದಾಾರಿ, ಪ್ರಮುಖ ರಸ್ತೆೆಘಿ, ವೃತ್ತಗಳಲ್ಲಿ, ಪಾರಂಪರಿಕ ಪ್ರದೇಶ, ಸರ್ಕಾರಿ ಕಟ್ಟಡಗಳ, ಉದ್ಯಾಾನವನಗಳಲ್ಲಿ ಇನ್ನು ಮುಂದೆ ಪ್ಲಾಾಸ್ಟಿಿಕ್, ಪಾಲಿಥಿನ್ಯುಕ್ತ ವಸ್ತುಗಳನ್ನೊೊಳಗೊಂಡ ಬಂಟಿಂಗ್ಸ್ಘಿ, ಬ್ಯಾಾನರ್ ಅಳವಡಿಕೆ, ಅಂಟಿಸುವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಪಾಲಿಕೆಯ ಪರಿಸರ ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ಹೊರಡಿಸಿದ್ದಾಾರೆ.
ಅಲ್ಲದೆ, ಬಟ್ಟೆೆ ಬ್ಯಾಾನರ್ ಅಳವಡಿಕೆಗೆ ವ್ಯಾಾಪಾರಿ, ಬ್ಯಾಾನರ್ ಅಳವಡಿಸುವವರಿಗೆ ಪ್ರತಿ ಚದರ ಮೀಟರ್ಗೆ 15 ರೂ ಮತ್ತು ತೆರವುಗೊಳಿಸಲು ಶೇ.25ರಷ್ಟು ಶುಲ್ಕಘಿ, ಶೇ.15ರಷ್ಟು ಆರೋಗ್ಯ ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ.
ಒಂದೊಮ್ಮೆೆ ನಿಷೇಧಿತ ಪ್ಲಾಾಸ್ಟಿಿಕ್, ್ಲೆಕ್ಟ್ಘಿ, ಬ್ಯಾಾನರ್, ಬಂಟಿಂಗ್ಸ್ ಅಳವಡಿಸಿ ನಿಯಮ ಉಲ್ಲಂಘಿಸಿದವರಿಗೆ 15 ರಿಂದ 50 ಸಾವಿರ ರೂಪಾಯಿವರೆಗೂ ದಂಡ, ತ್ಯಾಾಜ್ಯ ನಿರ್ವಹಣಾ ನಿಯಮಗಳಡಿ ಶಿಸ್ತು ಕ್ರಮವೂ ಜರುಗಸಲಾಗುವುದು. ಅನುಮತಿ ಇಲ್ಲದೆ ಅಂಟಿಸಿದ ್ಲೆಕ್ಸ್ಘಿ, ಬ್ಯಾಾನರ್, ಬಂಟಿಂಗ್ಸ್ಗಳನ್ನು ತಕ್ಷಣ ತೆಗೆದು ಅದನ್ನು ಅಳವಡಿಸಿದವರಿಂದಲೆ ಖರ್ಚು ವಸೂಲಿಗೆ ಪಾಲಿಕೆ ಕ್ರಮ ವಹಿಸುವುದಾಗಿ ಎಚ್ಚರಿಸಲಾಗಿದೆ.
ಈ ಕಟ್ಟು ನಿಟ್ಟಿಿನ ಆದೇಶ, ನಿಯಮ ಉಲ್ಲಂಘನೆಯ ಹೇಳಿಕೆ ಈ ಹಿಂದೆಯೂ ಹೊರಡಿಸಿದ್ದರೂ ಜಾರಿಗೆ ಮಾತ್ರ ಕಟ್ಟುನಿಟ್ಟಾಾಗಿ ಬಂದಿಲ್ಲ ಎಂಬುದು ಸಾರ್ವಜನಿಕರ ಮಾತು. ಇನ್ನಾಾದರೂ ಪರಿಸರ ಹಾನಿ, ನಿಯಮ ಎಂಬುದನ್ನು ಕಾಗದಕ್ಕೆೆ ಸೀಮಿತಗೊಳಿಸದೆ ಜಾರಿಗೆ ತಂದು ಪ್ಲಾಾಸ್ಟಿಿಕ್ ಬ್ಯಾಾನರ್ ಹಾವಳಿಗೆ ಕಡಿವಾಣ ಹಾಕಲಿ ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ. ಎಷ್ಟರ ಮಟ್ಟಿಿಗೆ ಜಾರಿ ಬರುವುದೆಂಬುದನ್ನು ಕಾಲವೇ ಉತ್ತರಿಸಲಿದೆ ಕಾದು ನೋಡಬೇಕಿದೆ.

