ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ. 6 :ಬೆಂಗಳೂರು ಮೈಸೂರು ಹೆದ್ದಾರಿಯ ಮೇಲೆ ವಿಶೇಷವಾಗಿ ಟೋಲ್ ನಿರ್ಗಮನದ ಹತ್ತಿರ ಬಹಳಷ್ಟು ವಾಹನಗಳ ಚಾಲಕರು ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಾಲನೆ ಎಫ್ ಐ ಆರ್ ದಾಖಲಿಸುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆಲೋಕ್ ಕುಮಾರ್ ಆದೇಶಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆ ಸೂಚಿಸಿದ್ದರೂ ಸಹ ಪ್ರವೇಶ ನಿಯಂತ್ರಣ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ವಾಹನಗಳ ಚಾಲನೆಯನ್ನು ತಡೆಗಟ್ಟಲು ಯಾವುದೇ ಸಮರ್ಪಕವಾದ ಕ್ರಮ ಕೈಗೊಳ್ಳದಿರುವುದು ಕಂಡು ಬರುತ್ತಿದೆ. ಅಲ್ಲದೆ, ವಿರುದ್ಧ ದಿಕ್ಕಿನಲ್ಲಿ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ದಾಳಲಾಗುತ್ತಿವೆ. .
ಹೀಗಾಗಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆಲೋಕ್ ಕುಮಾರ್ ಪೊಲೀಸರು ಹಾಗೂ ವಾಹನ ಚಾಲಕರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ.
ವಿರುದ್ಧ ದಿಕ್ಕಿನಲ್ಲಿ ಚಲಿಸುವ ವಾಹನಗಳ ಚಾಲಕರುಗಳಿಂದ ಬೇರೆ ವಾಹನಗಳ ಪ್ರಯಾಣೀಕರ ಜೀವಕ್ಕೆ ಅಪಾಯವಾಗುತ್ತಿದೆ. ಈ ರೀತಿ ವಿರುದ್ಧ ದಿಕ್ಕಿನಲ್ಲಿ ಚಲಿಸುವ ವಾಹನ ಚಾಲಕರುಗಳ ವಿರುದ್ಧ ಕಲಂ 279, 184 ಐಎಂಎ ಕಾಯ್ದೆ ಪ್ರಕಾರ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸಬೇಕು. ಅಂತಹ ಚಾಲಕರ ಚಾಲನಾ ಪರವಾನೆಗಿಯನ್ನು ತತಕ್ಷಣ ಅಮಾನತ್ತಿನಲ್ಲಿಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಇದು ಅಲ್ಲದೆ ಒಂದು ಪಕ್ಷದಲ್ಲಿ ವಾಹನ ಚಾಲಕರ ಚಾಲನಾ ಪರವಾನಗಿ, ವಾಹನದ ನೋಂದಣಿ ಪ್ರಮಾಣ ಪತ್ರ , ರಹದಾರಿ ಇವುಗಳನ್ನು ಸರಿಯಾಗಿ ಹೊಂದಿಲ್ಲದಿದ್ದಲ್ಲಿ ಕಲಂ 207 ಐಎಂಎ ಕಾಯ್ದೆಯಡಿಯಲ್ಲಿ ಅವರ ವಾಹನವನ್ನು ವಶಕ್ಕೆ ಪಡೆಯತಕ್ಕದ್ದು, ಈ ಮೇಲ್ಕಂಡ ನಿರ್ದೇಶನಗಳನ್ನು ತಪ್ಪದೇ ಪಾಲನೆ ಮಾಡುವಂತೆ ಪೊಲೀಸರಿಗೆ ಅಲೋಕ್ ಕುಮಾರ್ ವಾರ್ನಿಂಗ್ ನೀಡಿದ್ದಾರೆ.