ಸುದ್ದಿಮೂಲ ವಾರ್ತೆ
ಚಿಂತಾಮಣಿ, ನ.20: ನಗರದ ಎಂ.ಜಿ. ರಸ್ತೆಯ 22ನೇ ವಾರ್ಡಿಗೆ ಸೇರಿದ ನಗರಸಭೆ ಮಾಂಸ ಮಾರುಕಟ್ಟೆ ಪಕ್ಕದಲ್ಲಿರುವ ಹಳೆ ಲಾಡ್ಜ್ ಕಟ್ಟಡಕ್ಕೆ ಭಾನುವಾರ ರಾತ್ರಿ ಬೆಖಿ ಬಿದ್ದು ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.
ಲಾಡ್ಜ್ ಕಟ್ಟಡ ಶಿಥಿಲಗೊಂಡಿದ್ದರಿಂದ ಇದನ್ನು ಜನರ ಬಳಕೆಗೆ ನೀಡುತ್ತಿಲಿಲ್ಲ. ಮಾಂಸ ಮಾರುಕಟ್ಟೆಯ ವ್ಯಾಪಾರಿಗಳು ಹಳೆಯ ವಸ್ತುಗಳನ್ನು ಇಡಲು ಈ ಕಟ್ಟಡ ಬಳಸಿಕೊಳ್ಳುತ್ತಿದ್ದರು. ಈ ಕಟ್ಟಡದಲ್ಲಿ ಹಳೆ ವಸ್ತುಗಳನ್ನು ದಾಸ್ತಾನು ಇಡಲಾಗಿತ್ತು. ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಕಟ್ಟಡ ಹೊತ್ತಿ ಉರಿದಿದೆ.
ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಕಟ್ಟಡ ಕುಸಿದು ಬೀಳುವ ಪರಿಸ್ಥಿತಿಯಲ್ಲಿದ್ದು ಸಮೀಪದ ನಿವಾಸಿಗಳು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸುವ ಮೂಲಕ ಆಗಬಹುದಾದ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಸ್ಥಳೀಯ ವ್ಯಾಪಾರಿಗಳು ಮತ್ತು ಲಾಡ್ಜ್ ಮಾಲೀಕರನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ.