ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.24:
ಮಾಡೆಲ್ ಹೌಸ್ನಲ್ಲಿ ಈ ಹಿಂದೆ ಕಳ್ಳತನ ಮಾಡಿದವರೆ ಬೆಂಕಿ ಹಚ್ಚಿಿದ್ದು, ಅವರಿಗೆ ಶಾಸಕ ನಾರಾ ಭರತರೆಡ್ಡಿಿಯ ಬೆಂಬಲವಿದೆ ಎಂದು ಶಾಸಕ ಜಿ. ಜನಾರ್ದನರೆಡ್ಡಿಿ ಅವರು ಆರೋಪಿಸಿದ್ದಾಾರೆ.
ಬೆಂಕಿಗೆ ಆಹುತಿ ಆಗಿರುವ ಮಾಡೆಲ್ ಹೌಸ್ಗೆ ಶನಿವಾರ ಭೇಟಿ ನೀಡಿ, ಸುದ್ದಿಗಾರರ ಜೊತೆ ಮಾತನಾಡಿದ ಅವರು,
ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಿಿದ ಘಟನೆಗೆ ಶಾಸಕ ಭರತ್ ರೆಡ್ಡಿಿ ಬೆಂಬಲಿಗರೇ ಕಾರಣ. ಈ ದುಷ್ಕೃತ್ಯ ರಾಜಕೀಯ ಪ್ರೇೇರಿತವಾಗಿದೆ. ಈ ಘಟನೆಯ ಹಿಂದೆ ದೊಡ್ಡ ಸಂಚಿದೆ ಎಂದು ಹೇಳಿದರು.
ಕೆಲ ತಿಂಗಳ ಹಿಂದೆ ಮಾಡೆಲ್ ಹೌಸ್ನಲ್ಲಿ ಕಳ್ಳತನ ನಡೆದಿತ್ತು. ಆಗ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಗಳನ್ನು ಸತೀಶ್ ಎನ್ನುವ ಪೊಲೀಸ್ ಅಧಿಕಾರಿ ವಶಕ್ಕೆೆ ಪಡೆದು ತನಿಖೆ ನಡೆಸುತ್ತಿಿದ್ದಾಾಗ ಅಧಿಕಾರಿ ಕೆ.ಪಿ. ರವಿಕುಮಾರ್ ಮತ್ತು ಶಾಸಕ ನಾರಾ ಭರತರೆಡ್ಡಿಿ ಒತ್ತಾಾಯದಿಂದ ಬಿಡಿಸಿದರು. ಈಗ, ಆ ಆರೋಪಿಗಳೇ ಮನೆಗೆ ಬೆಂಕಿ ಹಚ್ಚಿಿದ್ದಾಾರೆ ಎಂದರು.
ಬೆಂಕಿ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳನ್ನು ಪೊಲೀಸರು ಸರಿಯಾಗಿ ತನಿಖೆ ನಡೆಸಿದಲ್ಲಿ, ದುಷ್ಕೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಟಿ.ಎಚ್. ಸುರೇಶಬಾಬು, ಜಿ. ಸೋಮಶೇಖರರೆಡ್ಡಿಿ, ಮಾಜಿ ಸಂಸದರಾದ ಸಣ್ಣ ಕ್ಕೀರಪ್ಪ ಇನ್ನಿಿತರರು ಉಪಸ್ಥಿಿತರಿದ್ದರು.
ರಾಜಕೀಯ ದುಷ್ಕೃತ್ಯಕ್ಕಾಗಿ ಬೆಂಕಿ : ಶಾಸಕ ಜಿ. ಜನಾರ್ದನರೆಡ್ಡಿ

