ಸುದ್ದಿಮೂಲ ವಾರ್ತೆ ಹುಮನಾಬಾದ, ಜ.14:
ಸಂಕ್ರಾಾಂತಿ ಹಬ್ಬದ ಹಿನ್ನಲೆ ಗಾಳಿಪಟ ಉತ್ಸವದಲ್ಲಿ ಬಳಸುವ ನೈಲನ್ ಮಾಂಜಾದಾರ ಕುತ್ತಿಿಗೆ ಕೊಯ್ದು ವ್ಯಕ್ತಿಿಯೊಬ್ಬ ಬಲಿಯಾದ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಾಮದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಬುಧವಾರ ಮಧ್ಯಾಾಹ್ನ ಸಂಭವಿಸಿದೆ.
ಸಂಜುಕುಮಾರ ಗುಂಡಪ್ಪ ಹೊಸಮನಿ (48) ಮೃತ ವ್ಯಕ್ತಿಿ ಎಂದು ಗುರುತಿಸಲಾಗಿದೆ.
ದ್ವಿಿಚಕ್ರ ವಾಹನದ ಮೇಲೆ ಬಂಬುಳಗಿ ಗ್ರಾಾಮದಿಂದ ಹುಮನಾಬಾದ ಪಟ್ಟಣ ಕಡೆಗೆ ಆಗಮಿಸುತ್ತಿಿರುವ ಮಧ್ಯದಲ್ಲಿ ತಾಳಮಡಗಿ ಹತ್ತಿಿರ ಗಾಳಿಪಟದ ನೈಲನ್ ದಾರಾ ವ್ಯಕ್ತಿಿಯ ಕುತ್ತಿಿಗೆಗೆ ಸಿಲುಕಿಕೊಂಡು ಭಾರಿ ರಕ್ತ ಸ್ರಾಾವಗೊಂಡು ಸ್ಥಳದಲ್ಲಿಯೇ ವ್ಯಕ್ತಿಿ ಮೃತ ಪಟ್ಟ ಬಗ್ಗೆೆ ಮಾಹಿತಿ ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆೆ ಮನ್ನೊೊಖೇಳ್ಳಿಿ ಪಿಎಸ್ಐ ಮಹೇಂದ್ರಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅದೇ ರೀತಿ ಮಹೇಶ ಶಿವಪುರ ಎಂಬಾತನ ಹಣೆಗೆ ದಾರ ಕತ್ತರಿಸಿದ್ದು, 15 ಹೊಲಿಗೆ ಹಾಕಲಾಗಿದೆ.
ಬಾಕ್ಸ್
ಗಾಳಿಪಟ ಹಬ್ಬ: ಎಚ್ಚರಿಕೆ
ಹುಮಾನಾಬಾದ್ : ಪ್ರತಿ ವರ್ಷದಂತೆ ಸಂಕ್ರಾಾತಿ ಹಬ್ಬದ ನಿಮಿತ್ಯ ಹುಮನಾಬಾದ ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಗಾಳಿಪಟ ಹಾರಿಸಿ ಹಬ್ಬ ಆಚರಣೆ ಮಾಡಲಾಗುತ್ತಿಿದೆ. ಗಾಳಿಪಟ ಹಾರಿಸಲು ನೈಲಾನ ಮಾಂಜಾ ದಾರ ಹಾಗೂ ನೈಲಾನ ಮಾಂಜಾ ತರ ಇರುವಂತ ಬೇರೆ ದಾರಗಳನ್ನು ಉಪಯೋಗಿಸಿ ಪ್ರಾಾಣ ಹಾನಿ/ಪಶು ಮತ್ತು ಪಕ್ಷಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುವುದು ಕಂಡು ಬರುತ್ತದೆ. ಹೀಗಾಗಿ ಹುಮನಾಬಾದ ಪಟ್ಟಣದಲ್ಲಿ ಮತ್ತು ತಾಲ್ಲೂಕಿನಲ್ಲಿ ಇಂತಹ ದಾರಗಳನ್ನು ಉಪಯೋಗಿಸದೇ ಸಾಮಾನ್ಯ ದಾರ ಉಪಯೊಗಿಸಿ ಹಬ್ಬ ಆಚರಣೆ ಮಾಡಬೇಕೆಂದು ಹುಮನಾಬಾದ ತಹಸೀಲ್ದಾಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಕ್ಸ್
ಬೀದರ ಕೋಟೆ ಸುತ್ತಮುತ್ತ ಗಾಳಿಪಟ ಹಾರಾಟ ನಿಷೇಧ
ಬೀದರ : ಬೀದರ ಕೋಟೆಯ ಸುತ್ತಮುತ್ತಲಿನ ಪ್ರದೇಶದ ಆಗಸದಲ್ಲಿ ಭಾರತೀಯ ವಾಯುಪಡೆ ವತಿಯಿಂದ 16-01-2026 ರಂದು ಸೂರ್ಯ ಕಿರಣ ಏರ್ ಶೋ ಹಮ್ಮಿಿಕೊಂಡಿದ್ದು, ಏರ್ ಶೋ ಅಂಗವಾಗಿ ಬೀದರ ಕೋಟೆಯ ಸುತ್ತಮುತ್ತಲಿನ ಮೂರು ಮೈಲಿಗಳ ಪ್ರದೇಶದ ವ್ಯಾಾಪ್ತಿಿಯಲ್ಲಿ ದಿನಾಂಕ: 15-01-2026 ರಂದು ಬೆಳಿಗ್ಗೆೆ 10:30 ರಿಂದ 12 ಗಂಟೆಯವರೆಗೆ ಹಾಗೂ ದಿನಾಂಕ: 16-01-2026 ರಂದು ಬೆಳಿಗ್ಗೆೆ 10:30 ರಿಂದ 12:00 ಗಂಟೆಯವರೆಗೆ ಮತ್ತು 15:45 ರಿಂದ 17:00 ಗಂಟೆಯವರೆಗೆ ಗಾಳಿಪಟ ಹಾರಿಸುವುದು ನಿಷೇಧಿಸಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿ ಶಿವಾನಂದ ಬಿ. ಕರಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಳಿಪಟಕ್ಕೆ ಹಾರಿ ಹೋಯ್ತು ಪ್ರಾಣ

