ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.08:
ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಅದು ಮನುಷ್ಯನಿಗೆ ಬದುಕುವ ದಾರಿ ತೋರಿಸುತ್ತದೆ ಎಂದು ಸಿಂಧನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಾಧ್ಯಾಾಪಕ ವೀರೇಶ ಕನ್ನಾಾರಿ ಹೇಳಿದರು.
ಸಿಂಧನೂರಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಿಂದ ಇಂದಿರಾನಗರದ ಸ್ವಾಾಮಿ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಜಾನಪದ ಸಾಹಿತ್ಯ ಯುವಕರಲ್ಲಿ ಕಡಿಮೆಯಾಗುತ್ತಿಿದೆ. ಎಲ್ಲರೂ ಜಾನಪದ ಸಾಹಿತ್ಯ ತಿಳಿದುಕೊಳ್ಳುವುದರ ಮೂಲಕ ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಗ್ನಿಿಶಾಮಕ ದಳದ ಸಿಬ್ಬಂದಿ ಮುನಿರೆಡ್ಡಿಿ ಮಾತನಾಡಿ, ಅಗ್ನಿಿ ಅವಘಡಗಳು ಸಂಭವಿಸಿದಾಗ ಅಗ್ನಿಿಶಾಮಕದ ಅನಾಹುತದಿಂದ ಹೇಗೆ ತಪ್ಪಿಿಸಿಕೊಳ್ಳುಬೇಕು ಎಂದು ವಿದ್ಯಾಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ಸ್ವಾಾಮಿ ವಿವೇಕಾನಂದ ಆಶ್ರಮದ ಸದಾನಂದ ಮಹಾರಾಜ್ ವಹಿಸಿದ್ದರು. ಉಪನ್ಯಾಾಸಕ ಅಯ್ಯಣ್ಣ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ನಾಗರಾಜ್ ಮುಕ್ಕುಂದಾ, ಪತ್ರಕರ್ತ ಅಂಬಣ್ಣ, ನಗರ ಪೊಲೀಸ್ ಠಾಣೆ ಅಧಿಕಾರಿ ವಿಜಯಕುಮಾರ್, ಉಪನ್ಯಾಾಸಕ ಬಸವರಾಜ ಚಿಗರಿ, ನೂರ್ ಮಹಮದ್ ಉಪಸ್ಥಿಿತರಿದ್ದರು.
ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳಿವೆ : ವೀರೇಶ ಕನ್ನಾರಿ

