ಸುದ್ದಿಮೂಲ ವಾರ್ತೆ ರಾಯಚೂರು, ಡಿ.16:
ನಾವು ಸೇವಿಸುವ ಆಹಾರ ಮತ್ತು ಅನುಸರಿಸುವ ಜೀವನಶೈಲಿ ಬಗ್ಗೆೆ ಅರಿವು ಮೂಡಿಸಲು ಡಿ.18ರಂದು ನಗರದ ನ್ಯೂ ಅಮೃತ ಮಕ್ಕಳ ಆಸ್ಪತ್ರೆೆಯಲ್ಲಿ ಕಾರ್ಯಾಗಾರ ಹಮ್ಮಿಿಕೊಳ್ಳಲಾಗಿದೆ ಎಂದು ಡಾ.ಜಿ.ಎಸ್.ಮಲ್ಲೇಶಗೌಡ ತಿಳಿಸಿದ್ದಾರೆ.
ನಮ್ಮ ಆರೋಗ್ಯ ಹಾಗೂ ದೇಹದ ರೋಗನಿರೋಧಕ ಶಕ್ತಿಿಯನ್ನು ನೇರವಾಗಿ ಪ್ರಭಾವ ಬೀರುತ್ತದೆ. ಅತಿಯಾದ ಸಕ್ಕರೆ, ಎಣ್ಣೆೆಯುಕ್ತ ಅಡುಗೆ,ವ್ಯಾಾಯಾಮದ ಕೊರತೆ ಮತ್ತು ಒತ್ತಡದಿಂದ ಇಂದು ಸಕ್ಕರೆ ಕಾಯಿಲೆ, ರಕ್ತದೊತ್ತಡ, ಜಡತ್ವದಂತಹ ಸಮಸ್ಯೆೆಗಳು ಹೆಚ್ಚುತ್ತಿಿರುವ ಕುರಿತು ಜಾಗೃತಿ ಮೂಡಿಸಲು ಸಂಜೆ 4 ಗಂಟೆಗೆ ಆಯೋಜಿಸಿರುವ ಕಾರ್ಯಾಗಾರದಲ್ಲಿ ವಿಷಯ ತಜ್ಞರಾದ ಬೆಂಗಳೂರಿನ ಡಾ.ಆಶಾ ಬೆನಕಪ್ಪ ಅವರು ಮಾತನಾಡಲಿದ್ದಾರೆ. ಸಾರ್ವಜನಿಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸಿ ಆರೋಗ್ಯ ಕಾಪಾಡುವ ಬಗ್ಗೆೆ ತಿಳಿದುಕೊಳ್ಳುವಂತೆ ಮನವಿ ಮಾಡಿದ್ದಾರೆ.

