ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಸಣ್ಣ ಸಣ್ಣ ಗ್ರಾಾಮದ ಪಡಿತರ ಚೀಟಿದಾರರಿಗೆ ತೊಂದರೆಯಾಗದಂತೆ 100ಕ್ಕಿಿಂತ ಹೆಚ್ಚು ಕಾರ್ಡ್ ಇರುವ ಕಡೆ ಉಪಕೇಂದ್ರಗಳನ್ನು ಪ್ರಾಾರಂಭಿಸಿ ಆಹಾರ ಧಾನ್ಯ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿಿರುವ ವಿಧಾನಮಂಡಲದ ಅಧಿವೇಶನದ ವಿಧಾನಸಭೆಯ ಪ್ರಶ್ನೋೋತ್ತರ ಕಲಾಪದಲ್ಲಿ ಗುರುಮಿಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರ ಪ್ರಶ್ನೆೆಗೆ ಉತ್ತರಿಸಿ ಮಾತನಾಡಿದ ಅವರು ಹೊಸ ನ್ಯಾಾಯಬೆಲೆ ಅಂಗಡಿ ಮಂಜೂರು ಮಾಡಲು ಅವಕಾಶ ಕಲ್ಪಿಿಸಲಾಗಿದ್ದು ಅದರಂತೆ ಅಗತ್ಯಾಾನುಸಾರ ಹೊಸ ನ್ಯಾಾಯಬೆಲೆ ಅಂಗಡಿ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿಿದೆ ಎಂದು ಹೇಳಿದರು.
ಪ್ರತಿ ಮೂರು ಕಿ.ಮೀ.ಗೆ ಒಂದಂತೆ ನ್ಯಾಾಯಬೆಲೆ ಅಂಗಡಿ ಇರಬೇಕು ಎಂಬ ನಿಯಮ ಇದೆ. 20,463 ಪ್ರಸ್ತುತ ರಾಜ್ಯದಲ್ಲಿರುವ ನ್ಯಾಾಯ ಬೆಲೆ ಅಂಗಡಿಗಳಲ್ಲಿ ಸುಮಾರು 1500 ರಿಂದ 2000, ಪಡಿತರ ಚೀಟಿ ಹೊಂದಿರುವ ನ್ಯಾಾಯಬೆಲೆ ಅಂಗಡಿಗಳಲ್ಲಿ ಹೆಚ್ಚುವರಿ ಕಾರ್ಡಗಳನ್ನು ವೈಜ್ಞಾನಿಕವಾಗಿ ಮರು ವರ್ಗೀಕರಣ ಮಾಡಿದಾಗ ಸುಮಾರು 4600 ಅಂಗಡಿಗಳನ್ನು ಇನ್ನೂ ಸೃಜಿಸಬಹುದು. ನ್ಯಾಾಯಬೆಲೆ ಅಂಗಡಿಗಳನ್ನು ಆ ಊರಿನ ಲಾನುಭವಿಗಳಿಗೆ ಅನುಕೂಲವಾಗುವಂತೆ ಹೊಸ ನ್ಯಾಾಯಬೆಲೆ ಅಂಗಡಿ ಮಂಜೂರು ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಪರಿಶಿಷ್ಟ ಜಾತಿ ಆಥವಾ ಪರಿಶಿಷ್ಟ ಪಂಗಡಗಳ ಸಮುದಾಯಗಳ ಜನಸಂಖ್ಯೆೆಯು ಶೇ.40ಕ್ಕಿಿಂತ ಹೆಚ್ಚಿಿರುವ ನ್ಯಾಾಯಬೆಲೆ ಅಂಗಡಿ ಪ್ರದೇಶದಲ್ಲಿ ಆದ್ಯತೆಯ ಮೇಲೆ ಹೊಸ ನ್ಯಾಾಯಬೆಲೆ ಅಂಗಡಿಗಳು ಮತ್ತು ನವೀಕರಿಸಿದ ನ್ಯಾಾಯಬೆಲೆ ಅಂಗಡಿಗಳನ್ನು ಆ ಸಮುದಾಯದವರಿಗೆ ನೀಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಹೊಸ ನ್ಯಾಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ- ಪಂಗಡದ ಸಮುದಾಯದ ಸಂಘ ಸಂಸ್ಥೆೆಗಳಿಗೆ, ಸಮುದಾಯದ ಖಾಸಗಿ ವ್ಯಕ್ತಿಿಗಳಿಗೆ ಮೀಸಲಾತಿ ಅನುಸರಿಸಿ ಹೊಸ ನ್ಯಾಾಯಬೆಲೆ ಅಂಗಡಿ ಮಂಜೂರು ಮಾಡಲು ಆದ್ಯತೆ ನೀಡುವ ಬಗ್ಗೆೆ ಜಿಲ್ಲಾ ಮಟ್ಟದ ಸಮಿತಿ ರಚಿಸಿ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗಿದೆ.
ಕೇಂದ್ರ ಸರ್ಕಾರದ ಸುವಿಧಾ ಯೋಜನೆಯಡಿ 75 ವಯಸ್ಸಿಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನಸುವಿಧಾ ಮಾಡ್ಯುಲ್ ಮೂಲಕ ಅರ್ಹ ಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ವಿತರಣೆ ಕಾರ್ಯ ಅನುಷ್ಠಾಾನಗೊಳಿಸಲಾಗಿರುತ್ತದೆ ಎಂದು ಸಚಿವ ಕೆ. ಹೆಚ್.ಮುನಿಯಪ್ಪ ವಿಧಾನಸಭೆಯಲ್ಲಿ ವಿವರಿಸಿದರು.
ಉಚಿತ ಅಕ್ಕಿಿ ಯೋಜನೆಯೇ ಯಶಸ್ವಿಿ ಆಗುತ್ತಿಿಲ್ಲ:
ಅನ್ನಭಾಗ್ಯ ಯೋಜನೆಯಡಿ ಅಕ್ಕಿಿ ಕೊಡುತ್ತೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿಿದೆ. ಆದರೆ, ಗುರಮಿಠಕಲ್ ಕ್ಷೇತ್ರದಲ್ಲಿ ಒಂದೊಂದು ನ್ಯಾಾಯಬೆಲೆ ಅಂಗಡಿಗೂ 6-8 ಕಿ.ಮೀ. ಅಂತರ ಇದೆ. ಬಡವರು ತಮ್ಮ ದಿನನಿತ್ಯದ ಕೂಲಿ ಕೆಲಸ ಬಿಟ್ಟು ಥಂಬ್ ಕೊಡುವುದಕ್ಕಾಾಗಿ ಒಂದು ದಿನ ಹೋಗಬೇಕು. ಅಕ್ಕಿಿ ತರುವುದಕ್ಕಾಾಗಿ ಮತ್ತೊೊಂದು ದಿನ ಹೋಗಬೇಕು. ಪಡಿತರ ಅಂಗಡಿ ಮುಚ್ಚಿಿದ್ದರೆ ಮತ್ತೊೊಂದು ದಿನ ಕೆಲಸ ಬಿಟ್ಟು ಹೋಗಬೇಕು. ಹೀಗೆ ಉಚಿತ ಅಕ್ಕಿಿ ಕೊಡುತ್ತೇವೆ ಎಂದು ಮೂರ್ನಾಲ್ಕು ಬಾರಿ ತಿರುಗಿಸುತ್ತಾಾರೆ. ಪ್ರತಿ ಸಾರಿ ಹೋದಾಗಲೂ ಆಟೋ, ಜೀಪುಗಳಿಗಾಗಿ ನೂರಾರು ರೂಪಾಯಿ ಖರ್ಚು ಬರುತ್ತದೆ ಎಂದು ಸಮಸ್ಯೆೆಯ ವಿವರಿಸಿದರು.
ನನ್ನ ಕ್ಷೇತ್ರದಲ್ಲಿ 55 ತಾಂಡಾಗಳಿವೆ. ಅದರೆ, ಅಹಾರ ಇಲಾಖೆ ತಾಂಡಾಗಳ ಬಗ್ಗೆೆ ತಪ್ಪುು ಮಾಹಿತಿ ನೀಡಿದೆ. ತಾಂಡಾಗಳಿಗೂ ಸಹ ಅವರು ಇದ್ದ ಸ್ಥಳದಲ್ಲಿಯೇ ಪಡಿತರ ವಿತರಣೆ ಆಗುತ್ತಿಿಲ್ಲ. 100 ಕಾರ್ಡ್ ಇದ್ದರೆ ಅಲ್ಲಿಯೇ ಆಹಾರ ವಿತರಣೆ ಮಾಡಬೇಕು ಎಂಬ ನಿಯಮ ಇದ್ದರೂ ಅಧಿಕಾರಿಗಳು ಇದರ ಬಗ್ಗೆೆ ಕಿಂಚಿತ್ತೂ ತಲೆಕೆಸಿಕೊಂಡಿಲ್ಲ. ಸ್ವಾಾತಂತ್ರ್ಯ ಬಂದು ಇಷ್ಟುವರ್ಷ ಅದರೂ ಉಚಿತ ಅಕ್ಕಿಿಗಾಗಿ ಇಷ್ಟೊೊಂದು ತಿರುಗಾಡಬೇಕೆ ಎಂದು ಸದನದ ಗಮನ ಸೆಳೆದರು.
ಶರಣಗೌಡ ಕಂದಕೂರ ಪ್ರಶ್ನೆಗೆ ಅಹಾರ ಸಚಿವ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ 100ಕ್ಕಿಿಂತ ಹೆಚ್ಚು ಕಾರ್ಡ್ ಇದ್ದರೆ ಪಡಿತರ ವಿತರಣೆಗೆ ಉಪಕೇಂದ್ರ ಸ್ಥಾಪನೆ

