ಸುದ್ದಿಮೂಲ ವಾರ್ತೆ ಬೆಂಗಳೂರು, ನ.28:
ಸ್ನಾಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಸಂಬಂಧ ಸೇವಾ ನಿರತ ಅಭ್ಯರ್ಥಿಗಳಿಗೆ ಇಚ್ಚೆೆ/ಆಯ್ಕೆೆಗಳನ್ನು ದಾಖಲಿಸಲು/ಬದಲಿಸಲು ನ.30ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪಿಜಿ ವೈದ್ಯಕೀಯ ಪ್ರವೇಶಕ್ಕೆೆ ಆಯಾ ಇಲಾಖೆಯ ಸೇವಾ ನಿರತ ಅಭ್ಯರ್ಥಿಗಳು ಆಯ್ಕೆೆ ಮಾಡಿಕೊಳ್ಳಲು ಅನುಮತಿಸಿರುವ ಪಿಜಿ ಕೋರ್ಸುಗಳ ಬಗ್ಗೆೆ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅವುಗಳಿಗೆ ಮಾತ್ರ ಇಚ್ಛೆೆ/ಆಯ್ಕೆೆಗಳನ್ನು ದಾಖಲಿಸಬೇಕು. ಕೆಲವರು ಇಲಾಖೆ ಅನುಮತಿ ನೀಡದಿರುವ ಕೋರ್ಸ್ ಗಳಿಗೂ ಇಚ್ಛೆೆ ದಾಖಲಿಸಿದ್ದು ಅಂತಹವರು ಕೂಡ ಇಚ್ಛೆೆಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಒಂದು ವೇಳೆ ಇಲಾಖೆ ಅನುಮತಿ ನೀಡದಿರುವ ಕೋರ್ಸ್ ಗಳಿಗೂ ಇಚ್ಚೆೆಗಳನ್ನು ನಮೂದಿಸಿದ್ದಲ್ಲಿ ಸೀಟು ಹಂಚಿಕೆ ಸಂದರ್ಭದಲ್ಲಿ ಅವುಗಳನ್ನು ಕೈಬಿಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಸಹಾಯಕ ಪ್ರಾಾಧ್ಯಾಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯ ತಾತ್ಕಾಾಲಿಕ ಪಟ್ಟಿಿಯಲ್ಲಿ ಹೆಸರು ಇರುವ ಹಾಗೂ ದೈಹಿಕ ವಿಶೇಷ ಚೇತನದ ಪ್ರವರ್ಗದಡಿ ಅರ್ಹತೆ ಗಳಿಸಿರುವವರ ದಾಖಲೆ ಪರಿಶೀಲನೆ ಡಿ.8 ಮತ್ತು 9ರಂದು ನಡೆಸಲಾಗುವುದು. ಎಲ್ಲಾಾ ಮೂಲ ದಾಖಲೆಗಳ ಸಮೇತ ಕೆಇಎ ಕಚೇರಿಯಲ್ಲಿ ಈ ದಿನಾಂಕಗಳಂದು ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಅವರು ಹೇಳಿದ್ದಾರೆ.

